Friday, April 12, 2024

ಬೆಳ್ತಂಗಡಿ: ತಾಜುಲ್ ಉಲಮಾ ರಿಲೀಫ್ ದ.ಕ. ಇದರ ವತಿಯಿಂದ ಉಚಿತ ಸುನ್ನತ್ ಅಭಿಯಾನ ಹಾಗೂ SSF ದ.ಕ. ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 216 ನೇ ರಕ್ತದಾನ ಶಿಬಿರ

ಬೆಳ್ತಂಗಡಿ: ತಾಜುಲ್ ಉಲಮಾ ರಿಲೀಫ್ ದಕ್ಷಿಣ ಕನ್ನಡ ಇದರ ವತಿಯಿಂದ ನಡೆಸಲ್ಪಡುವ ಉಚಿತ ಸುನ್ನತ್ ಅಭಿಯಾನದ ದ್ವಿತೀಯ ಶಿಬಿರ ಹಾಗೂ ಲೇಡಿಗೋಷನ್ ಆಸ್ಪತ್ರೆ&ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಸಹಕಾರದೊಂದಿಗೆ SSF ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 216 ನೇ ರಕ್ತದಾನ ಶಿಬಿರ  ಮುಹಿಯುದ್ದೀನ್ ಜುಮ್ಮಾ ಮಸೀದಿ ಇದರ ಮದರಸ ಸಭಾಂಗಣದಲ್ಲಿ ನಡೆಯಿತು, ಸುನ್ನತ್ ಗೆ 38 ಯತೀಮ್/ಮಿಸ್ಕೀನ್ ಕುಟುಂಬದ ಮಕ್ಕಳು ಭಾಗವಹಿಸಿದರು, ರಕ್ತದಾನ ಶಿಬಿರದಲ್ಲಿ ಮಹಿಳೆಯರು ಕೂಡ ರಕ್ತದಾನ ಮಾಡುವ ಮೂಲಕ ಮಾದರಿಯಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಲ್ಲೂರು ಮಸ್ಜಿದ್ ಅಧ್ಯಕ್ಷರಾದ M. ಮುಹಮ್ಮದ್ ವಹಿಸಿದ್ದರು, ಅಬ್ದುಲ್ ಅಝೀಝ್ ಝುಹ್’ರಿ ಕಿಲ್ಲೂರು ಪ್ರಾಸ್ತಾವಿಕ ಬಾಷಣ ಮಾಡಿ ತಾಜುಲ್ ಉಲಮಾ ರಿಲೀಫ್ ಕಮೀಟಿಯನ್ನು ಪರಿಚಯಿಸಿದರು, ಜಮಾಅತ್ ಕಾರ್ಯದರ್ಶಿ ಅಲ್ ಹಾಜ್ ಅಬ್ದುರಹ್ಮಾನ್ ಮುಸ್ಲಿಯಾರ್ ಕುಂತೂರು, ಇಸ್ಮಾಯಿಲ್ ಫೈಝಿ ಕಿಲ್ಲೂರು, ರಿಲೀಫ್ ಕಮಿಟಿಯ ಸಲಹೆಗಾರರಾದ ಮಡಂತ್ಯಾರ್ ಸಖಾಫ಼ಿ ಶುಭ ಹಾರೈಸಿದರು, ಕಾರ್ಯಕ್ರಮಕ್ಕೆ ಮುಖ್ಯ ಪ್ರಭಾಷಣಗರಾಗಿ ಆಗಮಿಸಿದ ಹಮೀದ್ ಫೈಝಿ ಕಿಲ್ಲೂರು ರವರು ಸಮಾಜ ಸೇವೆ ಮತ್ತು ಸಮುದಾಯ ಯುವ ಸಮೂಹ ಎಂಬ ವಿಷಯಯ ಬಗ್ಗೆ ಮುಖ್ಯ ಬಾಷಣ ಮಾಡಿದರು.

ತಾಜುಲ್ ಉಲಮಾ ರಿಲೀಫ್ ಕಮೀಟಿ ಇದರ ಅಧ್ಯಕ್ಷರಾದ ಮುಹಮ್ಮದ್ ಇಕ್ಬಲ್ ವಗ್ಗ, ಕಾರ್ಯದರ್ಶಿ ರಾಝಿಕ್ ಸಾಲೆತ್ತೂರು, ಕಾರ್ಯನಿರ್ವಾಹಕರಾದ ಅಬ್ದುಲ್ ಅಝೀಝ್ ಝುಹ್’ರಿ ಕಿಲ್ಲೂರು, ರಶೀದ್ ಝುಹ್’ರಿ ಕುಲಾಲ್, ಸಿದ್ದೀಕ್ ಕೊಳಕೆ,ಹಾಗೂ MNG ಪೌಂಡೆಶನ್ ಇದರ ಕಾರ್ಯನಿರ್ವಾಹಕ ಮನ್ಸೂರ್ ಬಿಸಿರೋಡ್ ಇವರನ್ನು ರಿಲೀಫ್ ವತಿಯಿಂದ ಸನ್ಮಾನಿಸಲಾಯಿತು,

ಮುಖ್ಯ ಅತಿಥಿಗಳಾಗಿ ಕಿಲ್ಲೂರು ಜಮಾಅತ್ ಉಪಾಧ್ಯಕ್ಷರಾದ ಅಬೂಬಕ್ಕರ್ ಮಲ್ಲಿಗೆ ಮಿತ್ತಬಾಗಿಲು ಗ್ರಾಮ ಪಂಚಾಯತ್ ಸದಸ್ಯರಾದ ಸಾಹುಲ್ ಹಮೀದ್ ಕಿಲ್ಲೂರು, SSF ಡಿವಿಷನ್ ಕೋಶಾಧಿಕಾರಿ ಝಮೀರ್ ಸಅದಿ ಬೆದ್ರಬೆಟ್ಟು, ಬ್ಲಡ್ ಸೈಬೋ ಇದರ ಉಸ್ತುವಾರಿ ಕರೀಂ ಕದ್ಕರ್, ತಾಜುಲ್ ಉಲಮಾ ಪೆರ್ಡಾಡಿ ಮಸ್ಜಿದ್ ಅಧ್ಯಕ್ಷರಾದ ಸುಲೈಮಾನ್ ಕೊಲ್ಲಿಬೆಟ್ಟು, ರಿಫಾಯಿಯ್ಯಾ ಮದರಸ ಬೆದ್ರಬೆಟ್ಟು ಇದರ ಅಧ್ಯಕ್ಷರಾದ ಉಮರ್ ಕೊಳಂಬೆ, SYS ನಾಯಕರಾದ ನಝೀರ್ ಪೆರ್ಡಾಡಿ, GCC ಕಿಲ್ಲೂರು ಯುನಿಟ್ ಕೋಶಾಧಿಕಾರಿ ಬದ್ರುದ್ದೀನ್ ಕಿಲ್ಲೂರು,

ಕುಕ್ಕಾವು ಮದ್ರಸ ಸದರ್ ಉಸ್ತಾದ್ ಝಕರಿಯ್ಯಾ ಹನೀಫಿ ಬೆದ್ರಬೆಟ್ಟು, ಹಾಗೂ SSF ಬೆಳ್ತಂಗಡಿ ಸೆಕ್ಟರ್, ಡಿವಿಷನ್ ನ ನಾಯಕರು ಬಾಗವಹಿಸಿದ್ದರು,

ಕಿಲ್ಲೂರು SSF ಯುನಿಟ್ ಕಾರ್ಯದರ್ಶಿ ಅಲ್ತಾಫ್ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದಗೆಯ್ದರು..

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...