ಸೌದಿಅರೇಬಿಯಾದ ಅಲ್ ಅಸಾ ಎಂಬಲ್ಲಿ ನಡೆದ ಹೆಚ್.ಸಿ.ಎಲ್. 2020-21 ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಕರ್ನಾಟಕದ ಮಂಗಳೂರು ಯುನೈಟೆಡ್ ಕ್ರಿಕೆಟ್ ತಂಡ ಪ್ರಥಮ ಸ್ಥಾನವನ್ನು ಪಡೆದು ಮಂಗಳೂರಿನ ಹಿರಿಮೆಯನ್ನು ಎತ್ತಿ ಹಿಡಿದಿದೆ.
ಪ್ರತಿ ವರ್ಷ ಈ ಸಂಸ್ಥೆ ಕ್ರಿಕೆಟ್ ಆಟವನ್ನು ಆಯೋಜಿಸುತ್ತಿದ್ದು ಸೌದಿ ಅರೇಬಿಯಾದ ತಂಡ ಮತ್ತು ಕೇರಳ ಇಲೆವೆನ್ ತಂಡದ ಪಾಲಾಗುತ್ತಿದ್ದ ಕಪ್ ಕರ್ನಾಟಕದ ಮಂಗಳೂರು ತಂಡದ ಪಾಲಾಗಿದೆ.
ಬಾರಿ ಅಂತಿಮವಾಗಿ ಪೈನಲ್ ಪಂದ್ಯಾಕೂಟದಲ್ಲಿ ಕೇರಳ ಇಲೆವೆನ್ ಹಾಗೂ ಮಂಗಳೂರು ಯುನೈಟೆಡ್ ತಂಡದ ನಡುವೆ ನಡೆದಿತ್ತು.
ಅದರಲ್ಲಿ ಕೇರಳ ಇಲೆವೆನ್ ತಂಡವನ್ನು ಸೋಲಿಸಿ ಮಂಗಳೂರು ಯುನೈಟೆಡ್ ತಂಡ ವಿಜಯಗಳಿಸಿದೆ.
ಈ ತಂಡದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಕಪ್ ನ್ನು ಮಹಮ್ಮದ್ ಹರ್ಷಾದ್ ಮುಂಡಾಜೆ ಅವರು ಪಡೆದುಕೊಂಡಿದ್ದಾರೆ.
ಇವರು ಬೆಳ್ತಂಗಡಿಯ ಮುಂಡಾಜೆ ಯಂಗ್ ಚಾಲೆಂಜರ್ ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಆಟಗಾರರಾಗಿದ್ದರು.
ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಕಪ್ ನ್ನು ಇಝಾದ್ ಮಂಗಳೂರು ಅವರು ಪಡೆದುಕೊಂಡಿದ್ದಾರೆ.