ಮಂಗಳೂರು : ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ (ರಿ).ಬಾಳ್ತಿಲ. ಮತ್ತು ಸೇವಾಶ್ರಮ ದೇರಳಕಟ್ಟೆ. ಇದರ ಸಹಯೋಗದೊಂದಿಗೆ ಜ. 3ರಂದು ಸೇವಾಶ್ರಮ ದೇರಳಕಟ್ಟೆ ಇಲ್ಲಿ ಉಚಿತ ರಕ್ತಪರೀಕ್ಷೆ , ಮಧುಮೇಹ ಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ಹಾಗೂ ವೃದ್ಧರೊಂದಿಗೆ ನಗು ನಲಿವು ಕಾರ್ಯಕ್ರಮ ನಡೆಯಿತು.



ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ಇಂಜಿನಿಯರ್ ಶ್ರೀ ನಿತೇಶ್ ಕುಮಾರ್ ನೆರವೇರಿಸಿ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಹೇಳಿ ಸಂಸ್ಥೆಯ ಸೇವೆಗೆ ಶುಭ ಹಾರೈಸಿದರು. ಟ್ರಸ್ಟಿ ಹಾಗೂ ಖ್ಯಾತ ವೈದ್ಯರಾದ ಶ್ರೀ ಡಾ.ರಾಜೇಶ್ ಪೂಜಾರಿ ಆರೋಗ್ಯ ಮಾಹಿತಿ ನೀಡಿ ಹಾಗೂ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಿದರು.
ಕಾರ್ಯಕ್ರಮದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ(ರಿ). ಬಾಳ್ತಿಲ. ಇದರ ಸಂಸ್ಥಾಪಕಿಯಾಗಿರುವ ವಕೀಲರಾದ ಶ್ಯೆಲಜಾರಾಜೇಶ್ ರವರು ಮಾತಾನಾಡಿ ಅಮ್ಮಂದಿರುವಾತ್ಯಲ್ಯ ಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಮತ್ತು ಸೇವಾಶ್ರಮ ದೇರಳಕಟ್ಟೆ ವತಿಯಿಂದ ಆರೋಗ್ಯ ಶಿಬಿರ ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹುತ್ತಾರೆ. ಆದರೆ ಅವರನ್ನು ಆಶ್ರಮಕ್ಕೆ ಬಿಟ್ಟು ಪ್ರೀತಿಯಿಂದ ವಂಚಿತಗೊಳಿಸುವುದು ಎಷ್ಟು ಸರಿ. ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಮಗುವಾಗಿರುವಾಗ ಒಬ್ಬ ತಾಯಿ ನಮಗೋಸ್ಕರವಾಗಿಯೇ ಜೀವಿಸುತ್ತಾಳೆ. ಆಕೆಗೆ ವಯಸ್ಸಾದಾಗ ಅವಳನ್ನು ನಮ್ಮಮಗುವಂತೆ ಪ್ರೀತಿಸಿ ಎಂದು ಹಿತನುಡಿ ಹೇಳಿದರು. ಅಲ್ಲದೇ ವೃದ್ಧರೊಂದಿಗೆ ಆಟೋಟಗಳನ್ನು ನಡೆಸಿ ನಕ್ಕು ನಲಿದು ಒಂದು ದಿನ ಆಶ್ರಮ ದಲ್ಲಿ ಕಳೆದರು.
ಆಶ್ರಮದ ಎಲ್ಲರಿಗೂ ಅವಶ್ಯಕ ದಿನ ಬಳಕೆ ಸಾಮಾಗ್ರಿಗಳ ಕಿಟ್ ನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿ ಅನ್ನಪೂರ್ಣ ರಾಜೇಶ್ ಬಿ. ಸೇವಾಶ್ರಮದ ಮೇಲ್ವಿಚಾರಕ ಬಾಲಕೃಷ್ಣ ಉಪಸ್ಥಿತರಿದ್ದರು.