ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳದಲ್ಲಿ ಸ್ಯಾಟಲೈಟ್ ಫೋನ್ ಆಕ್ಟಿವ್ ಸದ್ದು ಕೇಳಿ ಬಂದಿದೆ, ಅಮೂಲಕ ಭಯೋತ್ಪಾದನೆಯ ನಂಟು ಇದೇನಾ? ಎಂಬ ಸಂದೇಹ ಕೂಡ ಹೆಚ್ಚಾಗಿದೆ.
ಕರಾವಳಿಯಲ್ಲಿ ಸ್ಯಾಟ್ ಲೈಟ್ ಪೋನ್ ಆಕ್ಟೀವ್ ಆಗಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕಳೆದ ಐದಾರು ತಿಂಗಳಿನಿಂದ ಸೈಲೆಂಟಾಗಿದ್ದ ಸ್ಯಾಟಲೈಟ್ ಫೋನ್ ಗಳು ಕರಾವಳಿಯಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿದೆ. ಕಳೆದ 10 ದಿನಗಳಲ್ಲಿ 3 ಬಾರಿ ಆಕ್ಟಿವ್ ಸ್ಯಾಟಲೈಟ್ ಫೋನ್ ಆಕ್ಟೀವ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರೊ ಮಾಹಿತಿ ಮತ್ತು ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡಿರೋ ಗುಪ್ತಚರ ಏಜೆನ್ಸಿ ‘ರಾ’ ಅವರು ರಾಜ್ಯ ಗುಪ್ತಚರ ಇಲಾಖೆಗೆ ಸಂದೇಶ ರವಾನಿಸಿದ್ದಾರೆ. ತುರಾಯಾ ಸ್ಯಾಟಲೈಟ್ ಫೋನ್ ನಿಂದ ಸಂಪರ್ಕ ಎಂಬ ಮಾಹಿತಿ ನೀಡಲಾಗಿದೆ.
ಈ ಬಗ್ಗೆ ಈಗಾಗಲೇ ರಾಜ್ಯಗಪ್ತಚರ ಇಲಾಖೆ ತನಿಖೆ ಆರಂಭಿಸಿದ್ದಾರೆ.
*ಬಂಟ್ವಾಳದಲ್ಲಿ ಆಕ್ಟೀವ್*
ಕರಾವಳಿಯಲ್ಲಿ ಸೈಲೆಂಟ್ ಆಗಿದ್ದ ಸ್ಲೀಪರ್ ಸೆಲ್ ಗಳು ಮತ್ತೇ ಆಕ್ಟಿವ್ ಆಗಿರುವುದು ಗುಪ್ತಚರ ಇಲಾಖೆಯ ನಿದ್ದೆಗೆಡಿಸಿದೆ. ಅದರಲ್ಲೂ ಬಂಟ್ವಾಳ ದಲ್ಲಿ ನಿಗೂಢ ವ್ಯಕ್ತಿಗಳೊಂದಿಗೆ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ಮಾಹಿತಿ ಲಭ್ಯವಾಗಿವೆ. 2020ರ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಸ್ಯಾಟಲೈಟ್ ಪೋನ್ ತುಂಬಾ ಆಕ್ಟೀವ್ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು 3 ಬಾರಿ 2 ಕಡೆಗಳಲ್ಲಿ ಸಂಪರ್ಕ ಸಾಧಿಸಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಬಂಟ್ವಾಳದಲ್ಲಿ ಮೂರು ಬಾರಿ, ಬೆಳ್ತಂಗಡಿಯಲ್ಲಿ ಮೂರು ಬಾರಿ, ಸುಳ್ಯ ಒಂದು ಬಾರಿ ಹಾಗೂ ಸುಬ್ರಹ್ಮಣ್ಯದಲ್ಲಿ ಒಂದು ಬಾರಿ ಸ್ಯಾಟಲೈಟ್ ಸಂಪರ್ಕ ಸಾಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜುಲೈ ತಿಂಗಳಿನಲ್ಲಿ ಆಕ್ಟೀವ್ ಆಗಿದ್ದ ಸ್ಯಾಟಲೈಟ್ ಪೋನ್ ಸಂಪರ್ಕದ ಹಿನ್ನಲೆಯಲ್ಲಿ ಅಗಸ್ಟ್ ತಿಂಗಳಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೆಚ್ಚಿನ ಭದ್ರತೆಯ ನ್ನು ಕೂಡ ಮಾಡಲಾಗಿತ್ತು. ಆ ಬಳಿಕ ಸೈಲೆಂಟಾಗಿದ್ದ ಸೆಲ್ ಮತ್ತೆ ಸದ್ದು ಮಾಡಿದೆ.