ಮಂಗಳೂರು : ಸಸಿಹಿತ್ಲು ಬೀಚ್ ಗೆ ಬಂದ 9 ಮಂದಿ ಯುವಕರ ತಂಡ ಸಮುದ್ರಕ್ಕೆ ಇಳಿದ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿ ಏಳು ಮಂದಿಯನ್ನು ರಕ್ಷಣೆ ಮಾಡಲಾಗಿದ್ದು ಓರ್ವ ಸಾನ್ನಪ್ಪಿದ್ದು, ಇನ್ನೋರ್ವ ನೀರು ಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಮೃತಪಟ್ಟವರನ್ನು ಸಾಣೂರಿನ ಸುಂದರ್ (45) ಎಂದು ಗುರುತಿಸಲಾಗಿದೆ.
ತೋಕೂರು ಬಳಿಯ ಮೂಡುಮನೆಯೊಂದರಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಶುಕ್ರವಾರ ಆಗಮಿಸಿದ್ದವರು ತಿರುಗಾಡಲೆಂದು ಸಸಿಹಿತ್ಲು ಬೀಚ್‌ಗೆ ತೆರಳಿದ್ದರು ಎನ್ನಲಾಗಿದೆ. ಒಟ್ಟು 11 ಮಂದಿ ಬೀಚ್‌ಗೆ ತೆರಳಿದ್ದರು ಎನ್ನಲಾಗಿದ್ದು ಅದರಲ್ಲಿ 9 ಮಂದಿ ನೀರಿಗೆ ಇಳಿದಿದ್ದಾರೆ ಈ ವೇಳೆ ನೀರಿನ ಸೆಳೆತ ಜೋರಾಗಿದ್ದ ಪರಿಣಾಮ 9 ಮಂದಿ ನಿರುಪಾಲಾಗಿದ್ದಾರೆ ಆದರೆ ಕೂಡಲೇ ಸ್ಥಳೀಯ ಮೀನುಗಾರರು ಏಳು ಮಂದಿಯನ್ನು ರಕ್ಷಣೆ ಮಾಡಿದ್ದು ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ, ಇನ್ನೋರ್ವ ನೀರು ಪಾಲಾಗಿದ್ದು ಹುಡುಕಾಟ ನಡೆಯುತ್ತಿದೆ.
ಸದ್ಯ ರಕ್ಷಣೆಗೊಳಗಾದ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.