Monday, April 8, 2024

ಚುನಾಯಿತ ಜನಪ್ರತಿನಿಧಿಗಳಿಗೆ ಅಗೌರವ : ರೈ ಖಂಡನೆ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ: ತಾ.ಪಂ.ಅಧ್ಯಕ್ಷ. ಕರ್ಕೇರ

ಬಂಟ್ವಾಳ : ತಾಲೂಕು ಪಂಚಾಯತ್ ಅಧ್ಯಕ್ಷನ ನೆಲೆಯಲ್ಲಿ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಘಟಕ‌ ವೀಕ್ಷಣೆಗೆ ಭೇಟಿ ನೀಡಲು ಆಗಮಿಸಿದ ತನಗೆ ಪೊಲೀಸ್ ಅಧಿಕಾರಿಗಳು ಹಾಗೂ ವಿರೋಧಪಕ್ಷ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.

ಘಟಕದ ಗೇಟ್ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಉಳಿದ ನಾಲ್ಕು ಬಹುಗ್ರಾಮ ಯೋಜನೆಯ ಘಟಕಗಳನ್ನು ಮಾಜಿ ಸಚಿವ ರಮಾನಾಥ ರೈ ಉಪಸ್ಥಿತಿಯಲ್ಲಿ ವೀಕ್ಷಿಸಿದ್ದೇನೆ, ಆದರೆ ಈ ಬಾರಿ ಬಿಜೆಪಿ ರಾಜಕೀಯ ಷಡ್ಯಂತ್ರದ ಮೂಲಕ ಅಧಿಕಾರಿಗಳ ಮೆಲೆ ಒತ್ತಡ ಹೇರಿ ವೀಕ್ಷಣೆಗೆ ತಡೆ ಒಡ್ಡಿದೆ ಎಂದು ಆರೋಪಿಸಿದರು. ರಮಾನಾಥ ರೈ ಮುತುವರ್ಜಿಯಲ್ಲಿ ಸರಪಾಡಿ ಬಹುಗ್ರಾಮ ಕುಡೊಯುವ ನೀರಿನ ಘಟಕ ನಿರ್ಮಾಣಗೊಂಡಿದ್ದು, ಇದೀಗ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ಭೇಟಿಗೆ ಅವಕಾಶ ನಿರಾಕರಿಸಿರುವುದು ಸರಿಯಲ್ಲ ಎಂದವರು ಹೇಳಿದರು.

ಕೈಕೊಟ್ಟ ಅಧಿಕಾರಿಗಳು:

ಘಟಕ ವೀಕ್ಷಣೆಗೆ ಜೊತೆಗೆ ಆಗಮಿಸುವುದಾಗಿ ಅಧಿಕಾರಿಗಳು ಮಾಹಿತಿ‌ನೀಡಿದ್ದರು. ಆದರೆ ಘಟಕ ವೀಕ್ಷಣೆಗೆ ಬಾರದೆ ತಪ್ಪಿಸಿಕೊಂಡಿದ್ದಾರೆ. ಇದು ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ ಎಂದ ಅವರು ಈ ಕುರಿತಾಗಿ ತಾಲೂಕುಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ಅವರು ತಿಳಿಸಿದರು.

…….

ರೈ ಆಕ್ರೋಶ: ಬಹುಗ್ರಾಮ ಘಟಕ ವೀಕ್ಷಣೆಗೆ ಬಂದ ತಾ.ಪಂ‌., ಜಿ.ಪಂ. ಹಾಗೂ 2 ಗ್ರಾಮಪಂಚಾಯತ್ ಸದಸ್ಯರನ್ನು ಅಧಿಕಾರಿಗಳ ಮೂಲಕ ತಡೆಯೊಡ್ಡಿರುವುದು ಬಿಜೆಪಿಯ ರಾಜಕೀಯ ದಿವಾಳಿ ತನವನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ತಾನು ಆರು ಬಾರಿ ಶಾಸಕನಾಗಿದ್ದು, ಮೂರು ಬಾರಿ ಮಂತ್ರಿಯಾದವನು, ಜಿಲ್ಲೆಯ ಎಲ್ಲಿಯೂ ಇಲ್ಲದಷ್ಟು ಬಹುಗ್ರಾಮ ಕುಡಿಯುವ ನೀರಿನ ಘಟಕಗಳು ತನ್ನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಮಂಜೂರಾಗಿತ್ತು. ಆದರೆ ಕೇವಲ ರಾಜಕೀಯ ಮಾಡುತ್ತಿರುವ ಬಿಜೆಪಿ ಅಧಿಕಾರಿಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಜನಪ್ರತಿನಿಧಿಗಳಿಗೆ ಅಗೌರವ ತರುತ್ತಿದೆ, ಇದು ಸರಿಯಲ್ಲ ಎಂದ ತಾ.ಪಂ‌. ಹಾಗೂ ಜಿ.ಪಂ.ಸಾಮಾನ್ಯ ಸಭೆಯಲ್ಲಿಯೂ ಈ ಕುರಿತಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...