Thursday, October 19, 2023

ಸಜೀಪ ಮಾಗಣೆಯ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ

Must read

ಬಂಟ್ವಾಳ : ಸಜೀಪ ಮಾಗಣೆಯ ವತಿಯಿಂದ ನಡೆಯಲ್ಪಡುವ ವರ್ಷಾವಧಿ ಪುದ್ದಾರ್ ಮೆಚ್ಚಿ ಜಾತ್ರೆ ಜ.14 ರಂದು ರಾತ್ರಿ ನಡೆಯಿತು.

ಸಜೀಪ ಮಾಗಣೆಯ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ಧಾರ್ಮಿಕ ವಿಧಿವಿಧಾನಗಳಂತೆ ನಡೆಯಿತು.

ಸಂಪ್ರದಾಯದಂತೆ ಜ.7ರಂದು ಕೋಳಿ ಕುಂಟ ನಡೆದು ಬಳಿಕ 14 ರಂದು ಸಂಜೆ ವೇಳೆ ಕಾಂತಾಡಿಗುತ್ತುವಿನಿಂದ ಶ್ರೀ ದೈಯಂಗಳ ದೈವದ ಕಿರುವಾಲು ಸಜೀಪಮಾಗಣೆಯ ಸಂಕೇಶ ಭಂಡಾರದ ಮನೆಗೆ ಆಗಮಿಸಿ ನಂತರ ಸಜೀಪ ನಾಲ್ಕತ್ತೈಯ ದೈವಸ್ಥಾನದಿಂದ ನಾಲ್ಕತ್ತೈಯ ದೈವದ ಭಂಡಾರ ಸಂಕೇಶ ಭಂಡಾರದ ಮನೆಗೆ ಬಂದು , ಮುಂಜಾನೆ ವೇಳೆ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ಸಂಪನ್ನಗೊಂಡಿತು.

ಜ.15 ರಂದು ಬೆಳಿಗ್ಗೆ ಶ್ರೀ ನಡಿಯೇಲು ದೈಯಂಗಳ ನೇಮ ನಡೆಯಿತು. ಹಾಗೂ ರಾತ್ರಿ ವೇಳೆ ನಾಲ್ಕತ್ತೈಯ ದೈವಗಳ ಮೆಚ್ಚಿ ಹಾಗೂ ಪರಿವಾರ ದೈವಗಳಿಗೆ ನೇಮ ನಡೆಯಿತು.

ವಾಡಿಕೆಯಂತೆ ಬಳಿಕ ಜ.16 ಮಧ್ಯಾಹ್ನ ದ ವೇಳೆ ಭಂಡಾರ ಇಳಿಯುತ್ತದೆ.

ಈ ಸಂದರ್ಭದಲ್ಲಿ ಗಡಿ ಪ್ರಧಾನರಾದ ಕಾಂತಾಡಿಗುತ್ತು ಉಗ್ಗ ಶೆಟ್ಟಿ ಯಾನೆ ಗಣೇಶ್ ನಾಯ್ಕ್ , ಕೋಚುಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ, ಬಿಜಾಂದರ್, ನಗ್ರಿಗುತ್ತು, ಮಾಡಂತಾಡಿಗುತ್ತು, ಅಂಕದಕೋಡಿ, ಬಾಲಿಕೆ , ಪಾಲಮಂಟಮೆ ಕುಟುಂಬದವರು ಹಾಗೂ ಆಡಳಿತ ದಾರರಾದ ಸದಾನಂದ ಪೂಂಜ, ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಶ್ರೀಕಾಂತ್ ಶೆಟ್ಟಿ , ತಂತ್ರಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

More articles

Latest article