Tuesday, October 17, 2023

ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು ಸಜೀಪ ಮೂಡ!

Must read

ಬಂಟ್ವಾಳ: ಸಜೀಪ ಮೂಡ ಗ್ರಾಮದ ಪೆಲತ್ತಕಟ್ಟೆ ಎಂಬಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುಸ್ಲಿಂ ಯುವಕರನ್ನು ಸ್ಥಳೀಯರ ಸಹಕಾರದಿಂದ ವಿಠಲ ಕಂದೂರು ಇವರು ತನ್ನ ಆಟೋ ರಿಕ್ಷಾದಲ್ಲಿ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಗಾಯಾಳುಗಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಮಾನವೀಯ ಕಾರ್ಯಕ್ಕೆ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗಿದೆ. ಯಾವುದೇ ಬಾಡಿಗೆ ಪಡೆಯದೆ ಮಾನವೀಯತೆಯಿಂದ ಮತ್ತು ಚಾಲಕನಾಗಿ ಇದು ನನ್ನ ಕರ್ತವ್ಯ ಎಂದುಕೊಂಡು ಈ ಕಾರ್ಯವನ್ನು ವಿಠಲ ಅವರು ಮಾಡಿದ್ದಾರೆ. ಮಾರ್ನಬೈಲ್ ರಿಕ್ಷಾ ಪಾರ್ಕಿನ ಸದಸ್ಯರಾಗಿರುವ ವಿಠಲ ಕಂದೂರು ಇವರು ಈ ಹಿಂದೆ ಹಲವು ಬಾರಿ ರಸ್ತೆ ಅಪಘಾತಗಳು ನಡೆದಾಗಲೂ ತನ್ನ ಆಟೋದಲ್ಲಿ ಬಾಡಿಗೆ ಪಡೆಯದೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈ ಭಾಗದ ಆಪತ್ಭಾಂದವ ರಾಗಿದ್ದಾರೆ ಎಂದು ತಿಳಿದುಬಂದಿದೆ.

More articles

Latest article