ಬಂಟ್ವಾಳ: ರಾಜ್ಯ ಬಿಜೆಪಿ ಎಸ್. ಟಿ. ಮೋರ್ಚಾ ಕಾರ್ಯಕಾರಿಣಿ ಸಭೆಯು ಇಂದು ಚಾಮರಾಜನಗರದ ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿತು.



ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು. ರಾಜ್ಯ ಎಸ್. ಟಿ. ಮೋರ್ಚಾದ ಅಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೊದಲಿಗೆ ರಾಜ್ಯಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲಾಯ್ತು.
ಈ ಸಭೆಯಲ್ಲಿ ದ.ಕ. ಜಿಲ್ಲೆಯಿಂದ ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷರಾದ ಮಂಜುನಾಥ್ ಕೆ.ಎನ್. ಪುತ್ತೂರು, ಜಿಲ್ಲಾ ಎಸ್.ಟಿ. ಮೋರ್ಚಾದ ಅಧ್ಯಕ್ಷರಾದ ಚೆನ್ನಕೇಶವ ನಾಯ್ಕ್ ಅರಸಮಜಲ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ನಾಯ್ಕ್ ಎರ್ಮೆನಾಡ್ ಬಂಟ್ವಾಳ ಮತ್ತು ಹರೀಶ್ ನಾಯ್ಕ್ ಬಿಜತ್ರೆ ಪುತ್ತೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತಪ್ಪ ನಾಯ್ಕ್ ಬೆಳ್ತಂಗಡಿ ಹಾಗೂ ಜಿಲ್ಲಾ ಕಾರ್ಯಕಾರಿ ಸದಸ್ಯ, ಬಂಟ್ವಾಳ ಮಂಡಲ ಉಪಾಧ್ಯಕ್ಷರಾದ ಜಯರಾಮ್ ನಾಯ್ಕ್ ಕುಂಟ್ರಕಲ ಇವರು ಭಾಗವಹಿಸಿದರು.