ಪುತ್ತೂರು : ಲಕ್ಷಾಂತರ ರೂ ಮೌಲ್ಯ ದ ಚಿನ್ನಭಾರಣ ಕಳ್ಳತನ ಪ್ರಕರಣ ನಡೆದು 24 ಗಂಟೆಗಳಲ್ಲಿ ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು .
ಕಬಕದ ಮನೆಯೊಂದರಲ್ಲಿ ನಾಲ್ಕು ಲಕ್ಷ ರೂಪಾಯಿ ಮೌಲ್ಯ ದ ಚಿನ್ನಭಾರಣ ಕಳ್ಳತನ ನಡೆದ ಪ್ರಕರಣ ವನ್ನು ಭೇದಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಪ್ರಕರಣ ದಾಖಲಾದ 24 ಗಂಟೆಯೊಳಗಡೆ ಪ್ರಕಾರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂದಿಸಲಾಗಿದೆ.
ಪುತ್ತೂರು ತಾಲೂಕಿನ ಕಬಕ ವಿದ್ಯಾಪುರ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಸಂಸೇರ್ (24ವ ) ಮತ್ತು ಕೊಡಿಪ್ಪಾಡಿ ಗ್ರಾಮದ ಒಜಾಲ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ಮೊಹಮ್ಮದ್ ಮುಬಾರಕ್ (26 ವ ) ರವರು ಬಂಧಿತ ಆರೋಪಿಗಳು.
ಈ ಕಾರ್ಯಾಚರಣೆ ಯಲ್ಲಿ ನಿರೀಕ್ಷಕ ಗೋಪಾಲ ನಾಯ್ಕ ಉಪನಿರೀಕ್ಷಕ ಜಂಬುರಾಜ್ ಮಹಾಜನ್, ಎ.ಎಸ್.ಐ.ವೆಂಕಟರಮಣ ಗೌಡ, ಸಿಬ್ಬಂದಿ ಗಳಾದ ಜಗದೀಶ್ ರಾಜೇಶ್, ಕಿರಣ, ನಾಗೇಶ್ ಭಾಗವಹಿಸಿದ್ದರು.