ಪುಂಜಾಲಕಟ್ಟೆ: ಗಂಡ ಹೆಂಡತಿ ಜಗಳ ವಿಚಾರಿಸಲು ಹೋದ ಪೋಲೀಸ್ ಸಿಬ್ಬಂದಿ ಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಕೊರಗಟ್ಟೆ ಎಂಬಲ್ಲಿ ನಡೆದಿದ್ದು ಆರೋಪಿಯ ಮೇಲೆ ಪ್ರಕರಣ ದಾಖಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಅಜ್ಜಿ ಬೆಟ್ಟು ಗ್ರಾಮದ ಕೊರಗಟ್ಟೆ ನಿವಾಸಿ ಗಣೇಶ್ ಆರೋಪಿಯಾಗಿದ್ದು ಈತನ ಮೇಲೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಅಜ್ಜಿ ಬೆಟ್ಟು ಗ್ರಾಮದ ಕೊರಗಟ್ಟೆ ನಿವಾಸಿ ಗಣೇಶ್ ಎಂಬವರು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು ಹೆಂಡತಿಗೆ ಹಲ್ಲೆ ನಡೆಸುತ್ತಿದ್ದ ಬಗ್ಗೆ ನೆರೆ ಮನೆಯವರು 112 ನಂ.ಗೆ ಪೋನ್ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಪೋಲೀಸ್ ಠಾಣಾ ಸಿಬ್ಬಂದಿ ನವೀನ ಮತ್ತು ಶ್ರೀ ಕುಮಾರ್ ಅವರು ಸ್ಥಳಕ್ಕೆ ಬೇಟಿ ಗಲಾಟೆ ಮಾಡುತ್ತಿದ್ದ ಆರೋಪಿ ಗಣೇಶ್ ಯಾಕೆ ಗಲಾಟೆ ಮಾಡುತ್ತೀ ಎಂದು ವಿಚಾರಿಸಿದಾಗ ಆತ ಸಿಬ್ಬಂದಿ ಶ್ರೀ ಕುಮಾರ್ ಮೇಲೆ ಕೈಯಲ್ಲಿದ್ದ ದೊಣ್ಣೆಯಿಂದ ಹಲ್ಲೆ ನಡೆಸಿ ಬಳಿಕ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಿಬ್ಬಂದಿಯ ಮೇಲಿನ ಹಲ್ಲೆ ಹಾಗೂ ಜೀವಬೆದರಿಕೆಯ ದೂರಿನ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಎಸ್.ಐ. ಸೌಮ್ಯ ಆರೋಪಿ ಗಣೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ದೆ.