Sunday, April 7, 2024

ನ್ಯಾಯವಾದಿಯಿಂದ ಜಾತಿ ನಿಂದನೆ ಪ್ರಕರಣ: ವಕೀಲರ ಸಂಘದ ದುರುಪಯೋಗಕ್ಕೆ ಖಂಡನೆ

ಬಂಟ್ವಾಳ : ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಪ್ರಕರಣದ ದಾರಿ ತಪ್ಪಿಸಲು ಮತ್ತು ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಲು ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಎಂಬವರು ವಕೀಲರ ಸಂಘವನ್ನು ದುರುಪಯೋಗ ಮಾಡುತ್ತಿರುವುದು ಖಂಡನೀಯ ಎಂದು ಮಣಿನಾಲ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಹೇಳಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 9ರಂದು ಸಂಜೆ ಮಣಿಹಳ್ಳದಿಂದ ಅಜಿಲಮೊಗರು ಮಾರ್ಗವಾಗಿ ತೆರಳುತ್ತಿದ್ದ ಮಣಿನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯ ಅಭಿಷೇಕ್ ಸುವರ್ಣ ಅವರ ಕಾರಿಗೆ ರಾಜೇಶ್ ಪೂಜಾರಿ ತನ್ನ ಕಾರನ್ನು ಅಡ್ಡ ಇಡುತ್ತಾ ದಾರಿ ಬಿಟ್ಟುಕೊಡದೆ ಸುಮಾರು 13 ಕಿಲೋ ಮೀಟರ್ ವರೆಗೆ ಸತಾಯಿಸಿದ್ದಾರೆ. ಇದರ ಸಂಪೂರ್ಣ ವಿಡಿಯೋ ನಮ್ಮಲ್ಲಿ ಇದೆ ಎಂದರು.

ಜನವರಿ 10ರಂದು ಮಧ್ಯಾಹ್ನ ಅಲ್ಲಿಪಾದೆ ಎಂಬಲ್ಲಿ ಲಿಂಗಪ್ಪ ಮತ್ತು ಗಿರೀಶ್ ಎಂಬವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ರಾಜೇಶ್ ಪೂಜಾರಿ ಮತ್ತು ಅವರ ತಂದೆ ನಾರಾಯಣ ಪೂಜಾರಿ ತಡೆದು ನಿಲ್ಲಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದನ್ನು ಅರಿತ ರಾಜೇಶ್ ಪೂಜಾರಿ ಪ್ರತಿಯಾಗಿ ಗ್ರಾಮದ ಒಂಭತ್ತು ಜನರ ವಿರುದ್ಧ ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಸುಳ್ಳು ದೂರು ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ನಮಗೆ ವಕೀಲರು ಮತ್ತು ವಕೀಲರ ಸಂಘದ ಮೇಲೆ ಗೌರವ ಇದೆ. ಅದೇ ರೀತಿ ನಮಗೆ ಪೊಲೀಸ್ ಇಲಾಖೆಯ ಮೇಲೂ ಭರವಸೆ ಇದ್ದು ಪ್ರಸಕ್ತ ದಾಖಲಾಗಿರುವ ಎರಡೂ ಪ್ರಕರಣವನ್ನು ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು .

ಗ್ರಾಮ ಪಂಚಾಯತ್ ಸದಸ್ಯ ಅಭಿಷೇಕ್ ಸುವರ್ಣ ಮಾತನಾಡಿ, ನೇಲ್ಯಪಲ್ಕೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಮೈದಾನದಲ್ಲಿ ಸಾರ್ವಜನಿಕರಿಗೆ ಕ್ರೀಡೆ ಸಹಿತ ಇತರ ಧಾರ್ಮಿಕ ಕಾರ್ಯಕ್ರಮ ನಡೆಸಲು ಹಿಂದಿನಿಂದಲೂ ಅವಕಾಶ ಇದೆ. ಆದರೆ ಇತ್ತೀಚೆಗೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ರಾಜೇಶ್ ಪೂಜಾರಿ ಅಡ್ಡಿಪಡಿಸುತ್ತಿದ್ದು ಇದನ್ನು ಪ್ರಶ್ನಿಸಿದ ಬಿಲ್ಲವ ಸಂಘದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕೂಡಾ ಈ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಸಮಾಜ ಸೇವೆಯಲ್ಲಿ ತೊಡಗಿರುವ ಪುರುಷೋತ್ತಮ ಪೂಜಾರಿ ಅವರಿಗೆ ಗ್ರಾಮದಲ್ಲಿ ಜನಮನ್ನಣೆ ಇದ್ದು ಇದನ್ನು ಸಹಿಸದ ರಾಜೇಶ್ ಪೂಜಾರಿ, ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಪುರುಷೋತ್ತಮ ಪೂಜಾರಿ ವಿರುದ್ಧ ರಾಜೇಶ್ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರೆದಿದ್ದಾರೆ. ಅವರ ಈ ದುರ್ನಡೆತೆಯ ಬಗ್ಗೆ ಈ ಹಿಂದೆಯೂ ಪೊಲೀಸರ ಗಮನಕ್ಕೆ ನೀಡಿದ್ದೆವು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ, ಗಿರೀಶ್, ಪ್ರಕಾಶ್ ಅಂಚನ್ ಉಪಸ್ಥಿತರಿದ್ದರು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...