ಬಂಟ್ವಾಳ: ತಾಲೂಕಿನಲ್ಲಿ ಜನವರಿ 31ರಂದು ನವಜಾತ ಶಿಶುವಿನಿಂದ ಐದು ವರ್ಷ ಒಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವ ಸಿದ್ಧತೆ ಆರೋಗ್ಯ ಇಲಾಖೆಯಿಂದ ನಡೆದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ.



ತಾಲೂಕಿನಲ್ಲಿ ಒಟ್ಟು 30,352 ಮಕ್ಕಳಿಗೆ ಲಸಿಕೆ ಹಾಕಲು 190 ಬೂತ್ ಗಳನ್ನು ಸಿದ್ಧತೆ ಮಾಡಲಾಗಿದ್ದು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಯಾಣ ಬೆಳೆಸುವ ಸಾರ್ವಜನಿಕರಿಗೆ ಮತ್ತಷ್ಟು ಸಹಕಾರ ಆಗುವಂತೆ ಪುದು, ಬಿ.ಸಿ.ರೋಡ್ ಸರಕಾರಿ ಮತ್ತು ಖಾಸಗಿ, ವಿಟ್ಲ ಸರಕಾರಿ ಮತ್ತು ಖಾಸಗಿ, ಕುರ್ನಾಡು ಬಸ್ ನಿಲ್ದಾಣಗಳಲ್ಲಿ ಒಟ್ಟು 6 ಟ್ರಾನ್ಸಿಟ್ ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.