ಬಂಟ್ವಾಳ: ಪೋಲೀಸ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಆಳಕ್ಕೆ ಬಿದ್ದು ಎಸ್.ಹಾಗೂ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮುಂಜಾನೆ ವೇಳೆ ಬಿಸಿರೋಡಿನಲ್ಲಿ ನಡೆದಿದೆ.



ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ . ಸಂಜೀವ ಹಾಗೂ ಚಾಲಕ ಸತೀಶ್ ಗಾಯಗೊಂಡವರು.
ಗಾಯಗೊಂಡ ಇಬ್ಬರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸ ಲಾಗಿದೆ.
*ಘಟನೆಯ ವಿವರ*
ಬೆಳಿಗ್ಗೆ ಸುಮಾರು 4.30 ರ ವೇಳೆ ಬಿಸಿರೋಡಿನಿಂದ ಪಾಣೆಮಂಗಳೂರು ಕಡೆಗೆ ಗ್ರಾಮಾಂತರ ಎಸ್.ಐ. ಸಂಜೀವ ಹಾಗೂ ಸತೀಶ್ ಅವರು ನೈ ಟ್ ರೌಂಡ್ಸ್ ನ ಡ್ಯೂಟಿಯಲ್ಲಿ ತೆರಳುವ ವೇಳೆ ಬಿಸಿರೋಡಿನ ಸರ್ಕಲ್ ಬಳಿಯ ಮಸೀದಿ ಯ ಎದುರು ಗಡೆ ದನವೊಂದು ಏಕಾಏಕಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಆಳಕ್ಕೆ ಜೀಪ್ ಉರುಳಿ ಬಿದ್ದಿದೆ.
ಘಟನೆಯಲ್ಲಿ ಎಸ್.ಐ.ಹಾಗೂ ಚಾಲಕ ಇಬ್ಬರಿಗೂ ಗಾಯಗಳಾಗಿದೆ.
ವಾಹನ ಕೆಳಗೆ ಬೀಳುವ ದೃಶ್ಯವನ್ನು ನೋಡಿದ ವಾಹನವೊಂದರ ಯುವಕರು ಅದೇ ಸಮಯದಲ್ಲಿ ಬರುತ್ತಿದ್ದ ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.