ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ 2020-21ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿವಿಧ ಚಟುವಟಿಕೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕೋವಿಡ್-19 ನೋಡಲ್ ಅಧಿಕಾರಿಯಾದ ಶ್ರೀದೇವಿಪ್ರಸಾದ್ ಶೆಟ್ಟಿ ಇವರು ಉದ್ಘಾಟಿಸಿ ಸೇವೆಯೇ ಮಾನವ ಜೀವನದ ಪರಮೋಚ್ಚ ಧ್ಯೇಯವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಯಾದ ಯತಿರಾಜ್ ಸ್ವಯಂಸೇವಕರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ವಸಂತ ಮಾಧವ ಮತ್ತು ಪ್ರಾಚಾರ್ಯರಾದ ಕೃಷ್ಣಪ್ರಸಾದ ಕಾಯರ್ ಕಟ್ಟೆ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ಫೂರ್ತಿ ಸ್ವಾಗತಿಸಿ, ಮಮತಾ ವಂದಿಸಿ, ಹಿತೇಶ್ ಕಾರ್ಯಕ್ರಮ ನಿರೂಪಿಸಿದರು.


