Monday, April 15, 2024

ಮುಂದಿನ 3 ವರ್ಷಗಳಲ್ಲಿ ರಾಜ್ಯದ ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ : ಸಚಿವ ಈಶ್ವರಪ್ಪ

ಬಂಟ್ವಾಳ: ಕೇಂದ್ರ ಸರಕಾರದ ಜಲಜೀವನ್ ಯೋಜನೆಯನ್ನು ಮನೆ ಮನೆಗೆ ಗಂಗೆ ಹೆಸರಿನಲ್ಲಿ ಪ್ರತಿ ಮನೆಗೂ ನಲ್ಲಿ ನೀರು ಪೂರೈಕೆ ಮಾಡಿ ಕರ್ನಾಟಕದಲ್ಲಿ ಮೂರೇ ವರ್ಷದಲ್ಲಿ ಪೂರ್ಣ ಅನುಷ್ಠಾನದ ಗುರಿ ಹೊಂದಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಜ.31ರಂದು ಬಿ.ಸಿ.ರೋಡಿನಲ್ಲಿ ಬಂಟ್ವಾಳ ಕ್ಷೇತ್ರದ ನರಿಕೊಂಬು ಹಾಗೂ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು.

ಪ್ರಸ್ತುತ ಬಂಟ್ವಾಳ 2 ಯೋಜನೆಯನ್ನು ಉದ್ಘಾಟಿಸಲಾಗಿದ್ದು, ಉಳಿದಿರುವ ಗ್ರಾಮಗಳಿಗೆ ಸಂಬಂಧಿಸಿ ಬಂಟ್ವಾಳಕ್ಕೆ 60 ಕೋ.ರೂ. ಹಾಗೂ ಮಂಗಳೂರು ಉತ್ತರಕ್ಕೆ 140 ಕೋ.ರೂ. ಸೇರಿ 200 ಕೋ.ರೂ.ಗಳಿಗೆ ಸಚಿವ ಸಂಪುಟದ ಅನುಮತಿ ಪಡೆಯಲಾಗುವುದು.

ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ತೊಂದರೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಸಿದ್ದರಾಮಯ್ಯ ಹಾಗೂ ಅವರು ಯಾವಾಗಲೂ ನಿದ್ದೆ ಮಾಡುತ್ತಿದ್ದು, ನಿದ್ರೆಯಿಂದ ಎದ್ದರೆ ಏನಾದರೂ ತೊಂದರೆ ನೀಡುತ್ತಾರೆ. ನಿಮ್ಮನ್ನು ಜನ ಸೋಲಿಸಿ ಮನೆಗೆ ಕಳುಹಿಸಿದ್ದು, ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಡಿಪಾಸಿಟ್ ಕಳೆದುಕೊಳ್ಳುತ್ತೀರಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ರಾಜೇಶ್ ನಾಯ್ಕ್ ಅವರ ರಾಜಧರ್ಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಜಿ.ಪಂ.ಅಧ್ಯಕ್ಷತೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಮಂಜುಳಾ ಮಾವೆ, ಕಮಲಾಕ್ಷಿ ಪೂಜಾರಿ, ಸಿಇಓ ಡಾ. ಸೆಲ್ವಮಣಿ, ಕಾರ್ಯಪಾಲಕ ಎಂಜಿನಿಯರ್ ನರೇಂದ್ರಬಾಬು ಉಪಸ್ಥಿತರಿದ್ದರು.

ತಾ.ಪಂ.ಇಒ ರಾಜಣ್ಣ ಸ್ವಾಗತಿಸಿದರು. ಎಇಇ ತಾರಾನಾಥ ಸಾಲ್ಯಾನ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು..

More from the blog

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

ಚೂರಿ ಇರಿತಕ್ಕೊಳಗಾಗಿ ಮಂಗಳೂರು ಏ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಇವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆರೋಗ್ಯ ವಿಚಾರಿಸಿ,ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರುಗಳೊಂದಿಗೆ ಮಾಹಿತಿ ಪಡೆದರು.

ಹಿಂದೂ‌ ಸಂಘಟನೆಯ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಯುವಸೇನೆಯ ಮುಖಂಡನಾಗಿದ್ದು, ಉದ್ಯಮಿಯಾಗಿರುವ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ.) 37ನೇ ವಾರ್ಷಿಕೋತ್ಸವ ಸಮಾರಂಭ

ಬಂಟ್ವಾಳ : ಈ ಮಣ್ಣಿನ ಸಂಸ್ಕೃತಿ, ಮೌಲ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ, ಈ ನಿಟ್ಟಿನಲ್ಲಿ ನವೋದಯ ಮಿತ್ರ ಕಲಾ ವೃಂದವು ಸಮಾಜಕ್ಕೆ ಪೂರಕವಾಗಿ ಸಮಾಜಮುಖಿ ಕಾರ್ಯಗಳನ್ನು...

ಲೋಕಸಭಾ ಚುನಾವಣೆ : ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ...