ಮುಂಬಯಿ : ಕೊರೋನಾ ಸಂದರ್ಭದಲ್ಲಿ ಸರಕಾರದ ನಿಯಮಾವಳಿಯನ್ನು ಪಾಲಿಸಿ ತೀಯಾ ಸಮಾಜ, ಮುಂಬಯಿಯ ಪಶ್ಚಿಮ ವಲಯ ಸ್ಥಳೀಯ ಸಮಿತಿಯು ಇಂದು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ನೆರವೇರಿಸಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಸ್ಥಳೀಯ ಸಮಿತಿಯು ಧಾರ್ಮಿಕ ಕಾರ್ಯವನ್ನು ನಡೆಸಿ ಇಂದಿನ ಯುವಜನಾಂಗದಲ್ಲಿ ಧಾರ್ಮಿಕ ಪ್ರಜ್ನೆಯನ್ನು ಮೂಡಿಸುವಂತೆ ಮಾಡುತ್ತಿದ್ದು ನಿಜಕ್ಕೂ ಅಭಿನಂದನೀಯ ಎಂದು ತೀಯಾ ಸಮಾಜ ಮುಂಬಯಿಯ ಉಪಾಧ್ಯಕ್ಷ, ಉದ್ಯಮಿ ರೂಪೇಶ್ ವೈ ರಾವ್ ಅಭಿಪ್ರಾಯ ಪಟ್ಟರುವರು.
ಜ. 17 ರಂದು ಜೋಗೇಶ್ವರಿ ಪಶ್ಚಿಮದ ಬಾಂದ್ರೇಕರ್ ವಾಡಿಯ ಶ್ರೀ ಸಿದ್ದಿವಿನಾಯಕ ಮಂದಿರದ ಸಭಾಗೃಹದಲ್ಲಿ ತೀಯಾ ಸಮಾಜ, ಪಶ್ಚಿಮ ವಲಯದ ವತಿಯಿಂದ ಜರಗಿದ 19 ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಬಾಗವಹಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರೂಪೇಶ್ ವೈ ರಾವ್ ನಮ್ಮ ಸಮಾಜದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಧಾರ್ಮಿಕ ಕಾರ್ಯಗಳು ಪೂರಕವಾಗುದರಲ್ಲಿ ಸಂದೇಹವಿಲ್ಲ ಎಂದರು.
ತೀಯಾ ಸಮಾಜ ಮುಂಬಯಿಯ ಪಶ್ಚಿಮ ವಲಯದ ಕಾರ್ಯಾಧ್ಯಕ್ಷ ಸುಧಾಕರ ಉಚ್ಚಿಲ್ ಇವರ ಯಜಮಾನಿಕೆಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಮಾಜಿ ಕೋಶಾಧಿಕಾರಿ ರಮೇಶ್ ಉಳ್ಳಾಲ್, ಪಶ್ಚಿಮ ವಲಯದ ಮಾಜಿ ಕಾರ್ಯಾಧ್ಯಕ್ಷ ಐಲ್ ಬಾಬು, ಸುಂದರ್ ಬಿ. ಐಲ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ದಿವ್ಯ ಆರ್. ಕೊಟ್ಯಾನ್, ಚಂದ್ರಾ ಸುವರ್ಣ, ತೀಯಾ ಸಮಾಜದ ಜೊತೆ ಕೋಶಧಿಕಾರಿ ವಿಶ್ವಥ್ ಬದ್ದೂರು, ಸಮಾಜದ ಸಾಂಸ್ಕೃತಿಕ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಚಿತ್ರ ನಟಿ ಚಂದ್ರಾ ವಸಂತ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ವಾಸುದೇವ ಪಾಲನ್, ಶೈಲೇಶ್ ಬಂಗೇರ, ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಪ್ರಭಾ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಪೂಜಾ ವಿಧಿಯನ್ನು ನರಹರಿ ತಂತ್ರಿ ಯವರು ನೆರವೇರಿಸಿದ್ದು ಪೂಜೆಯಲ್ಲಿ ರವಿಚಂದ್ರ ಸುವರ್ಣ ಮತ್ತು ದಿವ್ಯಾ ಸುವರ್ಣ ದಂಪತಿ ಭಾಗವಹಿಸಿದ್ದರು.
ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಬಾಬು ಕೋಟ್ಯಾನ್, ಕಾರ್ಯದರ್ಶಿ ಪದ್ಮನಾಭ ಸುವರ್ಣ, ಕೋಶಾಧಿಕಾರಿ ರಾಮಚಂದ್ರ ಎನ್ ಕೋಟ್ಯಾನ್ ಮತ್ತು ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಗೆ ಪ್ರಸಾದ ವಿತರಣೆ ನಂತರ ಲಘು ಉಪಹಾರದ ವ್ಯವಸ್ತೆ ಮಾಡಲಾಗಿತ್ತು.