Saturday, October 21, 2023

ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡೆ ಅಗತ್ಯ: ಸತೀಶ್ ಆರ್.ಐಲ್

Must read

ಮುಂಬೈ: ವಿಕ್ರೋಲಿ ಕನ್ನಡ ಸಂಘ ಸಂಚಾಲಿತ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟವು ಸರಕಾರದ ಕೋವಿಡ್ 19ರ ಸುರಕ್ಷಾ ನಿಯಮದ ಪ್ರಕಾರ ವರ್ಚುವಲ್ ನಿಯಮದ ಮುಖಾಮಠರ ಪ್ರಾರಂಭಿಸಲಾಯಿತು.
ಶಾಲಾ ವಿದ್ಯಾರ್ಥಿ ಅಥಿತಿ ಸೋನಾರ್ ಎಲ್ಲರನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಸತೀಶ್ ಆರ್. ಐಲ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರೀಡೆಗೆ ಚಾಲನೆಯಿತ್ತರು.  ಇಂದಿನ ಪರಿಸ್ಥಿತಿಯಲ್ಲಿ ಕ್ರೀಡೆಯನ್ನು ಮೈದಾನದಲ್ಲಿ ನಡೆಸುದರ ಬದಲು ವರ್ಚುವಲ್ ಸಿಸ್ಟಮ್ ಮುಖಾಮಠರ ವಿದ್ಯಾರ್ಧಿಗಳ ಮನೆಯಿಂದಲೇ ಮಾಡಬೇಕಾದ ಅನಿವಾರ್ಯ ಒದಗಿದೆ. ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡೆ ಅಗತ್ಯ. ಈ ಕ್ರೆಡೆಯಲ್ಲಿ ಯಶಸ್ವಿಯಾಗಿ ನಡೆಸಲು ಸಹಕರಿಸಿದ  ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು   ದೈಹಿಕ ಶಿಕ್ಷಕಿ ಮಹಾದೇವ ಸೋಲಾಸ್ಕರ್ ಮತ್ತು ಇತರ ಶಿಕ್ಷಕರ ಶ್ರಮ ಅಭಿನನನಿಯ ಎಂದರು.
ಪ್ರಧಾನ ಕಾರ್ರ್ಯದರ್ಶಿ ಉದಯ ಎಲ್ ಶೆಟ್ಟಿ ಮಕ್ಕಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಕ್ರೀಡಾ ಗೀತೆಯನ್ನು ಹಾಡಿದರು. ಶ್ರವಣ್ ಜಾದವ್ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ರಘುನಾಥ ಆಲ್ವಾ, ಉದಯ ಎಲ್ ಶೆಟ್ಟಿ, ಕೋಶಾಧಿಕಾರಿ ಗಳಾದ ಉಮೇಶ್ ಪೂಜಾರಿ ಮತ್ತು  ಪ್ರವೀಣ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಳಾದ ರಾಘವ ಕುಂದರ್ ಎಲ್ಲಾ ಶಿಕ್ಷಕ ರಕ್ಷಕ ವಾರಂದದವರು   ಉಪಸ್ಥಿತರಿದ್ದರು. ಕ್ರೀಡಾ ಕೂಟವು ಜ. 18 ರಿಂದ 23 ರ ತನಕ ನಡೆಯಲಿದೆ. ಕೊನೆಯದಾಗಿ ವಿದ್ಯಾರ್ಥಿ ವಿಘ್ನೇಶ್ ಶೆಟ್ಟಿ ಧನ್ಯವಾದವಿತ್ತರು

More articles

Latest article