ವಿಟ್ಲ : ಮಾಣಿ ಹಳೀರ ದ ರಹ್ಮಾನಿಯಾ ಜುಮಾ ಮಸ್ಜಿದ್ ನ ಖಾಝಿಯಾಗಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಮಾಣಿಯ ರಾಜ್ ಕಮಲ್ ಆಡಿಟೋರಿಯಂನಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಶಹೀರ್ ತಂಙಲ್ ಪೊಸೋಟು ಅಧ್ಯಕ್ಷತೆ ವಹಿಸಿದ್ದರು, ಇಬ್ರಾಹಿಂ ಫೈಝಿ ಕನ್ಯಾನ ಉದ್ಘಾಟಿಸಿದರು, ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ಮುಖ್ಯ ಬಾಷಣ ಮಾಡಿದರು. ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ, ಅಬ್ದುಲ್ಲ ಮದನಿ ಅಳಿಕೆ, ರಝಾಕ್ ಮದನಿ ಸೂರಿಕುಮೇರು, ಯಾಕೂಬ್ ಸಹದಿ ಬೆಟ್ಟಂಪಾಡಿ, ಅಹ್ಮದ್ ಮದನಿ ನೇರಳಕಟ್ಟೆ, ರಫೀಕ್ ಹಾಜಿ ಸುಲ್ತಾನ್, ಹುಸೈನ್ ಮುಸ್ಲಿಯಾರ್ ಇಸ್ಮಾಯಿಲ್ ಮದನಿ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿದ್ದರು.
ಎಸ್.ಎಂ.ಮಹಮ್ಮದ್ ಶಾಫಿ ಮಾಣಿ, ಸೂರಿಕುಮೇರು ಬದ್ರಿಯ ಜುಮಾ ಮಸೀದಿ ಅದ್ಯಕ್ಷ ಮೂಸಾ ಕರೀಮ್ ಮಾಣಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತು ಸದಸ್ಯ ಲತೀಫ್ ನೇರಳಕಟ್ಟೆ, ಯೂಸುಫ್ ಹಾಜಿ ಸೂರಿಕುಮೇರು, ಮಹಮ್ಮದ್ ಹಾಜಿ ಬಂಡಾಡಿ, ಯೂಸುಫ್ ಸಹೀದ್ ನೇರಳಕಟ್ಟೆ, ಇಬ್ರಾಹಿಂ ಹಾಜಿ ಮಾಣಿ, ಸುಲೈಮಾನ್ ಸೂರಿಕುಮೇರು, ಹಮೀದ್ ಇನಾಮ್ ಮಾಣಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಬ್ರಾಹಿಂ ಸಅದಿ ಮಾಣಿ ಪ್ರಸ್ತಾವಣೆಗೈದರು, ಶರೀಪ್ ಸಖಾಫಿ ಮಾಣಿ ಸ್ವಾಗತಿಸಿ, ಸಲೀಂ ಮಾಣಿ ವಂದಿಸಿದರು. ಡಿ.ಎಸ್.ಅಬ್ದುರ್ರಹ್ಮಾನ್ ಮದನಿ ಸೂರಿಕುಮೇರು ಕಾರ್ಯಕ್ರಮ ನಿರೂಪಿಸಿದರು.