ಬಂಟ್ವಾಳ : ಬಂಟ್ವಾಳ ತಾಲೂಕಿನ ಅಮ್ಟಾಡಿಯ ಶ್ರೀ ಮಂಗ್ಲಿಮಾರ್ ಅಣ್ಣಪ್ಪಸ್ವಾಮಿ ಜುಮಾದಿ ಬಂಟ ದೈವಸ್ಥಾನದ 2020ರ ಎಪ್ರಿಲ್ನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ನೇಮೋತ್ಸವವು ಮಹಾಮಾರಿ ಕೋರೋಣದಿಂದಾಗಿ ನಡೆದಿರುವುದಿಲ್ಲ. ಪ್ರಶ್ನಾ ಚಿಂತನಾ ಪ್ರಕಾರ ಜನವರಿ 21ನೇ ಗುರುವಾರ ಬೆಳಿಗ್ಗೆ ಕೋಳಿ ಕುಂಟ ಮತ್ತು ಜನವರಿ 23ನೇ ಶನಿವಾರ ರಾತ್ರಿ 7 ಗಂಟೆಗೆ ಒಳಗೊಂಡು ಬೆಳಗಿನ ಜಾವದವರೆಗೆ ಕಟ್ಟು ಕಟ್ಟಲೆಯೊಂದಿಗೆ ಮೂಲ ಮೈಸಂದಾಯ, ಮರ್ಲು ಜುಮಾದಿ, ಅಣ್ಣಪ್ಪಸ್ವಾಮಿ, ಜುಮಾದಿ ಬಂಟ, ದೈವಗಳಿಗೆ ಒಂದು ದಿನದ ನೇಮೋತ್ಸವವು ಜರಗಲಿರುವುದು. ಮೂಲ ಮೈಸಂದಾಯನ ನೇಮೋತ್ಸವ ನಂತರ ಅನ್ನಸಂತರ್ಪಣೆ ಜರಗಲಿರುವುದು. ಮುಂದಿನ ಏಪ್ರಿಲ್ನಲ್ಲಿ ವರ್ಷಂಪ್ರತಿ ನಡೆಯುವ ಮೂರು ದಿವಸದ ಚೆಂಡು ಹಾಗೂ ನಾಲ್ಕು ದಿವಸದ ನೇಮೋತ್ಸವವು ಯತಾ ಪ್ರಕಾರ ನಡೆಯಲಿರುವುದು ಎಂದು ಶ್ರೀ ಕ್ಷೇತ್ರ ಆಡಳಿತ ಮೊಕ್ತೇಸರ ಎ. ರವಿಶಂಕರ ಶೆಟ್ಟಿ ಬಡಾಜೆಗುತ್ತು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.


