ಮಾಣಿ : ಶ್ರೀ ಉಳ್ಳಾಲ್ತಿ ಯಕ್ಷಗಾನ ಬಯಾಲಾಟ ಸಮಿತಿ, ಮಾಣಿ ಮತ್ತು ಯಕ್ಷಗಾನ ಸಮಿತಿ, ಮಾಣಿ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ, ಪಾವಂಜೆ, ಮಂಗಳೂರು ಇವರು ಜ.17 ನೇ ರವಿವಾರ ಸಂಜೆ 5.30 ರಿಂದ ಮಾಣಿಯ ಗಾಂಧಿ ಮೈದಾನ ದಲ್ಲಿ “ಗಜೇಂದ್ರ ಮೋಕ್ಷ ” “ಸುದರ್ಶನ ಗರ್ವಭಂಗ ” “ಭಾರ್ಗವ ವಿಜಯ ” ಎಂಬ ಪೌರಾಣಿಕ ಆಖ್ಯಾನಗಳನ್ನು ಆಡಿ ತೋರಿಸಲಿರುವರು.



ಯಕ್ಷಗಾನ ದ ಭಾಗವತರು: ಪಟ್ಲ ಶತೀಶ್ ಶೆಟ್ಟಿ, ಪ್ರಪುಲ್ಲ ಚಂದ್ರ ನೆಲ್ಯಾಡಿ, ಚೆಂಡೆ – ಮದ್ದಳೆ: ಪದ್ಮನಾಭ ಉಪಾಧ್ಯ, ಗುರುಪ್ರಸಾದ್ ಬೋಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಸಂಗೀತ: ಪೂರ್ಣೇಶ್ ಆಚಾರ್ಯ, ಹಾಸ್ಯ: ಹಾಸ್ಯರತ್ನ ಉಜಿರೆ ನಾರಾಯಣ, ಸಂದೇಶ್ ಮಂದಾರ, ಸ್ತ್ರೀ ಪಾತ್ರ: ಅಕ್ಷಯ್ ಕುಮಾರ್ ಮಾರ್ನಾಡ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಶ್ ಕಾವುರ್.
ಇದೇ ಸಂದರ್ಭದಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.