Sunday, October 22, 2023

ಮಾಣಿಯಲ್ಲಿ “ಗಜೇಂದ್ರ ಮೋಕ್ಷ”, “ಸುದರ್ಶನ ಗರ್ವಭಂಗ”, “ಭಾರ್ಗವ ವಿಜಯ”ಯಕ್ಷಗಾನ ಬಯಲಾಟ

Must read

ಮಾಣಿ: ಮಾಣಿ ಶ್ರೀ ಉಳ್ಳಾಲ್ತಿ ಯಕ್ಷಗಾನ ಬಯಲಾಟ ಸಮಿತಿ ಮತ್ತು ಯಕ್ಷಗಾನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಬಯಲು ರಂಗಮಂದಿರದಲ್ಲಿ, ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಪ್ರತಿಷ್ಟಾದಿನಾಚರಣೆಯ ಸಲುವಾಗಿ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ಗಜೇಂದ್ರ ಮೋಕ್ಷ-ಸುದರ್ಶನ ಗರ್ವಭಂಗ-ಭಾರ್ಗವ ವಿಜಯ ಪ್ರಸಂಗಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು, ಕಾರ್ಯಕ್ರಮದ ಪ್ರಾಯೋಜಕರೂ ವಕೀಲರುಗಳಾದ ಕಲ್ಲಂಗಳಗುತ್ತು ರಾಜೇಶ್ ರೈ, ಸುಧಾಕರ ಪೈ ಮಾಣಿ ಉಪಸ್ಥಿತರಿದ್ದರು.

ಯಕ್ಷಗಾನ ಸಮಿತಿಯ ಅಧ್ಯಕ್ಷರಾದ ಮೋಹನ್ ಪೈ ಮಾಣಿ ಸ್ವಾಗತಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಆಳ್ವ, ಕೊಡಾಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

More articles

Latest article