Wednesday, October 18, 2023

ಲೊರೆಟ್ಟೊ ಚರ್ಚ್ ನಲ್ಲಿ ಗುರು ದೀಕ್ಷೆ

Must read

ಲೋರೆಟ್ಟೋ ಮಾತಾ ಚರ್ಚಿನಲ್ಲಿ ಮಂಗಳೂರಿನ ಧರ್ಮಾಧ್ಯಕ್ಷರು ಆಗಿರುವ ಅತಿ ವಂದನಿಯ ಪೀಟರ್ ಪಾವ್ಲ್ ಸಲ್ಡಾನ ರವರು ಲೊರೆಟ್ಟೊ ಚರ್ಚ್ ವ್ಯಾಪ್ತಿಯ ಕುರಿಯಾಳ ಗ್ರಾಮದ ಲೂಯಿಸ್ ಮತ್ತು ಬ್ರಿಡ್ಜಿಟ್  ಡೆಸ ದಂಪತಿಯ ಪುತ್ರರಾದ ವಂದನೀಯ ಮೆಲ್ವಿನ್ ಡೆಸ, ಎಸ್. ಜೆ . ಇವರಿಗೆ ಗುರು ದೀಕ್ಷೆಯನ್ನು ನೀಡಿ ಅವರಿಗಾಗಿ ಪ್ರಾರ್ಥಿಸಿ, ಅವರ ಕುಟುಂಬಸ್ಥರ ಹಾಗೂ ನೂರಾರು ಭಕ್ತಾದಿ ಗಳೊಂದಿಗೆ ಬಲಿಪೂಜೆ ಅರ್ಪಿಸಿದರು . ಇವರು ಗುಜರಾತ್ ಧರ್ಮ ಪ್ರಾಂತ್ಯದಲ್ಲಿ ಗುರುಗಳಾಗಿ ಸೇವೆ ಸಲ್ಲಿಸಲಿದ್ದಾರೆ.

ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷರು ಯೇಸುಕ್ರಿಸ್ತರ ಯೇಸುಕ್ರಿಸ್ತರ ಸೇವಾ ಹಾಗೂ ತ್ಯಾಗ-ಬಲಿದಾನಗಳ ಬೋಧನೆಯನ್ನು ನೀಡಿ ದರು. ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರುಗಳದ ವಂದನೀಯ ಫ್ರಾನ್ಸಿಸ್ ಕ್ರಾಸ್ತ ರವರು  ಬಲಿ ಪೂಜೆಯಲ್ಲಿ ಪಾಲ್ಗೊಂಡ ಗುರುಗಳ ಪರವಾಗಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಗುಜರಾತ್  ಧರ್ಮಪ್ರಾಂತ್ಯದ ಎಸ್. ಜೆ.  ಪ್ರೋ ವಿನ್ಸಿಯಲ್ ಅವರ ಪ್ರತಿನಿಧಿಯಾಗಿರುವ ವಂದನೀಯ ಜೇಮ್ಸ್ ವಾಸ್, ಎಸ್ .ಜೆ. ಅವರು ಧರ್ಮಧ್ಯಕ್ಷರಿಗೆ ಗುರು ದೀಕ್ಷೆ ನೀಡುವಂತೆ ವರದಿಯನ್ನು ಒಪ್ಪಿಸಿದರು. ಮಂಗಳೂರು ಧರ್ಮ ಧರ್ಮ ಪ್ರಾಂತ್ಯದ ವಂದನೀಯ  ವಿಜಯ್ ಮಚಾದೊ ರವರು ಧಾರ್ಮಿಕ  ವಿಧಿ ವಿಧಾನಗಳನ್ನು ನಿರೂಪಿಸಿದರು.

More articles

Latest article