ಬಂಟ್ವಾಳ: ಕೊರೊನಾ ವೈರಸ್ ನ ವಿರೋಧಿ ಲಸಿಕೆ ವಿತರಣೆಗೆ ಬಂಟ್ವಾಳ ತಯಾರಾಗಿದ್ದು, ನಾಳೆ.ಜ.16 ರಂದು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿತರಣೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚಾಲನೆ ನೀಡಲಿದ್ದಾರೆ.
*ಬಂಟ್ವಾಳ ತಲುಪಿದ ಕೋವಿಡ್ -19 ಲಸಿಕೆ*
ಕೋವಿಡ್ -19. ಲಸಿಕೆ ಕೋವಿ ಶಿಲ್ಡ್ ಶುಕ್ರವಾರ ಮಧ್ಯಾಹ್ನ ತಾಲೂಕಿನ ಆರೋಗ್ಯಾಧಿಕಾರಿಯವರ ಕಚೇರಿಯ ಲಸಿಕಾ ಸಂಗ್ರಹಣಾ ಕೇಂದ್ರ ಕ್ಕೆ ತಲುಪಿದೆ.
ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ ಲಸಿಕೆ ಪಡೆಯುವವರ ಪಟ್ಟಿ ತಯಾರು ಮಾಡಲಾಗಿದ್ದು ಸರಕಾರಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿ ಗಳಿಗೆ ಸೇರಿ ಒಟ್ಟು 100 ಮಂದಿಗೆ ವಿತರಣೆಯಾಗಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ! ದೀಪಾ ಪ್ರಭು ತಿಳಿಸಿದ್ದಾರೆ.
ಮುಂದಿನ ಮೊದಲ ಹಂತದಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ ಕೋವಿಡ್ ವಿರೋಧಿ ಲಸಿಕೆ ವಿತರಣೆಯಾಗಲಿದೆ.
ನಾಳೆ ಜಿಲ್ಲೆಯ ಒಟ್ಟು ಆರು ಕಡೆಗಳಲ್ಲಿ ವಿತರಣೆಗೆ ಚಾಲನೆ ನೀಡಲಾಗುತ್ತದೆ.
ಬಂಟ್ವಾಳ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ಬೂತ್ ನಲ್ಲಿ ಮಾತ್ರ ನಾಳೆ ಲಸಿಕೆ ಚಾಲನೆ ಜೊತೆ ವಿತರಣೆಯಾಗಲಿದೆ.