ಬೆಳ್ತಂಗಡಿ : ಹತ್ಯಡ್ಕ ಗ್ರಾಮದ ರಾಮಯ್ಯರ ಕಟ್ಟೆ ಮತ್ತು ಉಚ್ಚಿಕಟ್ಟ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಲಾಯಿತು.
ರುಪಾಯಿ 8.00 ಕೋಟಿ ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟು ರೂಪುಗೊಳ್ಳಲಿದೆ.
ಬದಿನಡೆ: ರೂ.3 ಕೋಟಿ ಅನುದಾನದಲ್ಲಿ ಬಳಂಜ ಗ್ರಾಮದ ಬದಿನಡೆ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಲಾಯಿತು.
ರೂ 1.5 ಕೋಟಿ ಅನುದಾನದಲ್ಲಿ ಗ್ರಾಮದ ಕಲ್ಲಾಟ ಎಂಬಲ್ಲಿ ಶಿಲನ್ಯಾಸ ನೆರವೇರಿತು.
ರೂ 1.5 ಕೋಟಿ ಅನುದಾನದಲ್ಲಿ ಸೋಣಂದೂರು ಗ್ರಾಮದ ನಡ್ಜೆ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲನ್ಯಾಸ ಕಾರ್ಯಕ್ರಮ ನಡೆಯಿತು.