ಯತೀಶನೆಂದರೆ
ನಾನು..
ನಾನೆಂದರೆ
ಯತೀಶ..!
ನೆನಪಿಡಿ ಇಲ್ಲಿರುವುದು ‘ನಾನೇ’..
‘ನಾನು’
ಹುಟ್ಟಿದ್ದು ಯಾವಾಗೆಂದು
ನೆನಪಿಲ್ಲ..
ಹುಟ್ಟಿದಾಗಲೇ ಹುಟ್ಟಿದ್ದಾ..
ಬೆಳೆದಾಗ ಬೆಳೆದಿದ್ದಾ..
ಹೆಸರಿಟ್ಟಾಗ ಬಂದದ್ದಾ..
ತಿಳಿಯುತ್ತಿಲ್ಲ..!
‘ಯತೀಶ’ ಸಾಯುವವರೆಗೂ
‘ನಾನು’ ಸಾಯುವುದಿಲ್ಲ..!
ಹೀಗೆ ಹೆಸರಿಡಬೇಕೆಂದು
ನನ್ನ ಆಸೆಯೇನಲ್ಲ..
ಇಟ್ಟ ಹೆಸರು ಈಗ ನನ್ನದೆ..
ಯತೀಶನ ಗುರುತಿಸಬೇಕು,
ಎಲ್ಲೆಲ್ಲೂ ನನ್ನ ಹೆಸರಿರಬೇಕು..
ಹೌದು ನಾನಿರಬೇಕು..!
ಮಾಡಿದ್ದು
ಕೂಡಿಟ್ಟದ್ದು
ಬೆವರಿಳಿಸಿದ್ದು
ಮುಖವಾಡ ಧರಿಸಿದ್ದು
ಬಣ್ಣ ಬಣ್ಣದ ಮಾತನಾಡಿದ್ದು
ಸತ್ಯ ಸುಳ್ಳು, ನಗು ಅಳು,
ಧರ್ಮ ಅಧರ್ಮ
ಜೀವನದಲ್ಲಿ ಅಳವಡಿಸಿದ್ದು
ಎಲ್ಲವೂ ನನಗಾಗಿ..
ಹಾ ಯತೀಶನಿಗಾಗಿ..!
ಮತ್ತೆ ಹೇಳುತ್ತಿದ್ದೇನೆ ಕೇಳಿ..
ಯತೀಶನೆಂದರೆ
‘ನಾನು’
ನಾನೆಂದರೆ
‘ಯತೀಶ’..!
ಬೇಕಾದರೆ
ನಿಮ್ಮ ಹೆಸರ ಹೇಳಿ ನೋಡಿ..!
‘ನಾನು’
ಯತೀಶ…!
✍ಯತೀಶ್ ಕಾಮಾಜೆ