Thursday, October 19, 2023

ಮಾಡರ್ನ್ ಕವನ- ಆ ನಾಲ್ಕು ಜನ

Must read

ಅವ್ವ ಹೇಳ್ತಿದ್ದಿದ್ದು

ಇಷ್ಟೇ..

ನಾಲ್ಕು ಜನ

ನಮ್ಮ ಬಗ್ಗೆ ಒಳ್ಳೆಯದನ್ನು

ಮಾತಾಡಬೇಕು…!

 

ಹುಡುಕಿದೆ

ಈಗ ಆ ನಾಲ್ಕು ಜನರನ್ನು..!

 

ಯಾರಿರಬಹುದು

ಈ ನಾಲ್ಕು ಜನ…

ಒಂದು ಅಮ್ಮ ಎಂದಿಟ್ಟುಕೊಳ್ಳುವ..

ಇನ್ನುಳಿದ ಮೂರು..?

ಅಪ್ಪ….!?

ಇದ್ದರೂ ಇರಬಹುದು..

ಅಣ್ಣ ಮತ್ತು ತಂಗಿ…

ಖಂಡಿತ ಇಲ್ಲ

ಕುಚುಕು…

ಅವನೊಬ್ಬ ಇದ್ದೇ ಇದ್ದಾನೆ..

ಇಲ್ಲಿಗೆ ಮೂರಾಯಿತು..

ಇನ್ನೊಬ್ಬ….

ಕಟ್ಟಿ ಕೊಂಡವಳು,

ಇಟ್ಟು ಕೊಂಡವಳು,

ಮಗಳು..,

ಮಗ..,

ಯಾರಿರಬಹುದು ಇದರಲ್ಲಿ…

 

ಕಷ್ಟ ರೀ ಕಷ್ಟ

ನಮ್ಮ ಬಗ್ಗೆ ಮಾತಾಡಲು

ನಾಲ್ಕು ಜನರನ್ನು

ಸೃಷ್ಟಿಸುವುದು..

ಆದರೂ ಸಾರ್ಥಕ

ಬದುಕಿಗಿರುವ

ಒಂದೇ ಒಂದು ವ್ಯಾಖ್ಯಾನ

ಅದೇ..

‘ಆ ನಾಲ್ಕು ಜನ..’

 

ಬಲಗೈ ಕೊಟ್ಟಿದ್ದು

ಎಡಗೈ ಗೆ ಗೊತ್ತಾಗದಿದ್ದರೆ

ಆ ನಾಲ್ಕು ಜನ ಹುಟ್ಟುವುದಿಲ್ಲ..

ಊರ ಸಂತೆಯಲ್ಲಿ

ಕೂಗಿ ಕರೆದು

ವ್ಯಾಪಾರ ಮಾಡಿದಂತೆ

ಉಪಕಾರ ಅನ್ನುವುದು..!

ಹೆಸರಿರಬೇಕು

ಅದಕ್ಕಾಗಿ

ದಾನ ಧರ್ಮದ ಮುಖವಾಡ.,

ಖರೀದಿಸಿ ಬಿಡಬಹುದು

ಆ ನಾಲ್ಕು ಜನರನ್ನು..

ಹಣವೊಂದಿರಬೇಕು.!

 

ಹೃದಯದಿಂದ

ಪ್ರೀತಿ ಹಂಚಿದವರು

ಇಲ್ಲಿ ಸಾಯವುದಿಲ್ಲ..

ಆದರೂ

ಹೃದಯವಂತನ

‘ನಟನೆ’ ನಿಲ್ಲುವುದಿಲ್ಲ..

 

ಕೊಳೆತು ಹೊಗುವ ಮುನ್ನ

ಒಳಿತು ಮಾಡು ಮನುಜ…!

 

ಯತೀಶ್ ಕಾಮಾಜೆ

More articles

Latest article