ನಿನ್ನೆ ನೆಟ್ಟ ಬಾಳೆಗಿಡ



ಇವತ್ತು ಹಣ್ಣು ನೀಡಬೇಕು
ಎನ್ನುವ ಬಯಕೆಯಲ್ಲೇ
ನಡೆದದ್ದು ಪ್ರಯೋಗ..!
ಪ್ರಯೋಗ ಯಶಸ್ವಿ
ಗೊಂಡಿತು..!
ನೆಟ್ಟ ಇಪ್ಪತ್ನಾಲ್ಕು ಗಂಟೆಯೊಳಗೆ
ಹಣ್ಣು ಬಿಡುವಂತೆ ಮಾಡಲಾಯಿತು.
ನಿಮಿಷ ನಿಮಿಷಕ್ಕೂ ಬೆಳವಣಿಗೆ..
ಗಂಟೆಗೊಮ್ಮೆ ನೀರು
ಒಂದಿಷ್ಟು ಗೊಬ್ಬರ
ಮತ್ತು ಮದ್ದು
ನೀಡಿದರೆ ಸಾಕು..
ತುಂಬಾ ಖುಷಿ
ಯಶಸ್ವಿ ಪ್ರಯೋಗ
ಇನ್ನೂ ಕಾಯಬೇಕಿಲ್ಲ
ಗಿಡ ಮರವಾಗಲು
ಹೂ ಬಿಟ್ಟು
ಕಾಯಿಯಾಗಲು
ಒಂದೇ ದಿನದಲ್ಲಿ
ಫಲ ಗ್ಯಾರಂಟಿ..!
ಗಿಡ ಬೆಳೆದು
ಗೊನೆ ಬಿಟ್ಟು
ಕಾಯಿ ಹಣ್ಣಾಗಿಯೇ ಬಿಟ್ಟಿತು..
ಆದರೆ..
ಹಣ್ಣು ಕಿತ್ತು
ಸಿಪ್ಪೆ ತೆಗೆದು
ಬಾಯಿಗೆ
ಇಡುವ ಹೊತ್ತಿಗೆ
ಹಣ್ಣು ಕೊಳೆತೂ ಬಿಟ್ಟಿತು..!
ಕಾಯದೆ ಸಿಕ್ಕ
ಫಲ
ಕೊಳೆತು ಹೋಗುವುದು ಸಾಮಾನ್ಯ..!
✍ಯತೀಶ್ ಕಾಮಾಜೆ