ಸಂತಸದಿ
ಅರಳಿ ನಲಿದ
ಹೂ ತನ್ನ ತೊಟ್ಟು
ಕಳಚಿದರೇನು?
ಗಿಡದಡಿಯ ನಳನಳಿಪ
ಹಸಿರು ಚಿಗುರಿಗಿಲ್ಲವೇ
ತನ್ನ ತಾತನ ಮೇಲೆ
ಪ್ರೀತಿ?
ನೆಲವನಪ್ಪದ ಹಾಗೆ
ತನ್ನೆಲೆಯ ಮೈಯನೆ
ಚಾಚಿ ನೆಲಕುದುರುವ
ಜೀವಕೆ ಉಸಿರಾದ
ಸಂತಸ!
ಹೆತ್ತೊಡಲ ಹಣ್ಣೆಲೆಗಳನು
ವೃದ್ಧಾಶ್ರಮ ಸೇರಿಸುವ
ಕಟು ಜೀವಗಳಿಗೆ
ಇದು ಆದೀತೆ
ನೀತಿ?
#ನೀ.ಶ್ರೀಶೈ