ನನ್ನೆದೆಯ ಮಮತೆ ನೀನು
ಮುದ್ದು ಕಂದ
ನಾಳೆಗಳ ಕನಸು ನೀನೆ
ನನ್ನ ಕಂದ!!
ಚಂದ್ರನಂತೆ ಹೊಳೆಯುತಿದೆ
ನಿನ್ನಯ ಮೊಗವು….
ತಾರೆಗಳೇ ನಾಚುವಂತೆ
ನಿನ್ನಯ ನಗುವು!!
ಅಮ್ಮನ ಸೀರೆಯ
ಜೋಲಿಯು ನಿನಗೆ…
ನಿದಿರೆಯಲ್ಲೂ ದಿಟ್ಟಿಸುವುದೇ
ಸಂಭ್ರಮ ನನಗೆ!!
ಮುದ್ದು ಮುದ್ದು ಮಾತಿನ
ನನ್ನಯ ಕಂದ….
ನಗುತಲಿರಲು ನೀನು ಸದಾ
ನನಗಾನಂದ!!
ಸೂರ್ಯನಂತೆ ಬೆಳಗುತಿರು
ಈ ಜಗದಲ್ಲಿ….
ಮತ್ತೆ ಮತ್ತೆ ಮಗುವಾಗು
ನನ್ನ ಮಡಿಲಲ್ಲಿ!!
*ಪ್ರಮೀಳಾ ರಾಜ್*