Wednesday, October 25, 2023

*ಭಾವಯಾನ*

Must read

ಮುಚ್ಚಿದ ಕಂಗಳಲಿ ಅರೆಬಿರಿದ ಕನಸುಗಳು ಮೂಡಿ

ಮನದೊಳಗೆ ಹೇಳಲಾಗದ ಭಾವವೊಂದು

ಒಳಗೊಳಗೆ ಕಾಡಿ ತಲ್ಲಣಿಸುವಂತೆ ಮಾಡುತ್ತವೆ!!

 

ಜೊತೆಯಾಗಿ ನಡೆದುದು

ಕೆಲವು ಹೆಜ್ಜೆಗಳಾದರೂ

ಅಚ್ಚಳಿಯದ ನೋವಿನ ಗುರುತಾಗಿ

ಮನವ ಕಾಡಿಸುತ್ತಿರುವುದು ವಿಪರ್ಯಾಸ!!

 

ಭಾವನೆಗಳೇ ಜೀವವೆಂದು ಬದುಕುವವರ

ಬಾಳಿನೊಳು ಸದ್ದಿಲ್ಲದೆ ನುಸುಳಿ ಕೆಲಕಾಲ ನಿಂತು

ಹೇಳದೆಯೇ ದೂರವಾಗುವವರಿಗೆ

ಸಂಬಂಧಗಳೆಂದರೆ ಸಂತೆಯಲ್ಲಿಟ್ಟ

ಸರಕುಗಳೋ ಏನೋ!!

 

ಒಂದಿಷ್ಟು ನಗಿಸಿ,ಒಂದಷ್ಟು ಅಳಿಸಿ

ಭಾವಗಳ ಜೊತೆಯಾಗಿ

ನೆನಪುಗಳ ಸಿಹಿಕಹಿ ಕಾಣಿಕೆಯನ್ನಿತ್ತು

ಮರೆಯಾದವರೆಲ್ಲರೂ

ಬಾಳಪುಟದ ಬರಹದಲಿ ಅಮರವಾಗಿರಲಿ!

ಈ ಬಾಳ ಕುಸುಮ ಸದಾ ಅರಳಲಿ!!

*ಪ್ರಮೀಳಾ ರಾಜ್*

More articles

Latest article