ಬಂಟ್ವಾಳ: ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಜ.14 ರಿಂದ ಜ.19ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್ ಅವರು ತಿಳಿಸಿದ್ದಾರೆ.
ಜ.14 ರಂದು ಬೆಳಗ್ಗೆ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ ಗಂಟೆ 11.30ಕ್ಕೆ ಪಂಚದುರ್ಗಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎ.ಜಗನ್ನಾಥ ಶೆಟ್ಟಿ ಅವರಿಗೆ ಅಭಿನಂದನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಜ.15ರಂದು ಬೆಳಗ್ಗೆ 108ಕಾಯಿ ಗಣಹೋಮ, ಚೆಂಡು ನಡೆಯಲಿದೆ. ಜ.16ರಂದು ಚಂಡಿಕಾ ಹೋಮ, ರಾತ್ರಿ ಬಾರ‍್ದಡ್ ಗುತ್ತಿನಿಂದ ಶ್ರೀ ಕಡಂಬಿಲ್ತಾಯ ಮತ್ತು ಕೊಡಮಣಿತ್ತಾಯ ದೈವಗಳ ಭಂಡಾರ ಬರುವುದು, ಬೋಂಟ್ರರ ಕಕ್ಯಗುತ್ತಿನಿಂದ ಮಲ್ಯೋಡಿತ್ತಾಯ ಮತ್ತು ಕಲ್ಕುಡ ದೈವದ ಭಂಡಾರ ಬರುವುದು. ದೈವಂಕುಳ ನೇಮ, ಜ.17ರಂದು ಸೂಕ್ತ ಹೋಮ, ಸಂಜೆ ಶ್ರೀ ದೇವರ ಪೇಟೆ ಸವಾರಿ, ಕವಾಟ ಬಂಧನ, ಜ.18ರಂದು ದಿವ್ಯ ದರ್ಶನ, ಸಂಜೆ ಉತ್ಸವಗಳು, ನೇಮ, ಮಹಾರಥೋತ್ಸವ, ಧ್ವಜಾವರೋಹಣ, ಜ.19ರಂದು ಸಂಪ್ರೋಕ್ಷಣೆ ನಡೆಯಲಿದೆ. ಪ್ರತೀದಿನ ಅನ್ನ ಸಂತರ್ಪಣೆ ನಡೆಯಲಿದೆ.