ವಿಟ್ಲ: ವಿಟ್ಲ ಜೆಸಿಐಯ 2010ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿವೃತ್ತ ರಿಜಿಸ್ಟಾರ್ ಚಂದ್ರಹಾಸ ರೈ ಬಿ, ಜೆಸಿಐ ಝೋನ್ ಎಕ್ಸ್ವಿ ಸೌಜನ್ಯ ಹೆಗ್ಡೆ, ಜೆಸಿಐ ಝೋನ್ ಎಕ್ಸ್ವಿ ಹೇಮಲತಾ ಪ್ರದೀಪ್ ಭಾಗವಹಿಸಿದ್ದರು. ಜೆಎಫ್ಎಂ ಚಂದ್ರಹಾಸ ಶೆಟ್ಟಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಸಮಾರಂಭದಲ್ಲಿ ಪ್ರದೀಪ್ ಬಾಕಿಲ, ಜೈಕಿಶನ್, ಬಾಲಕೃಷ್ಣ, ಆರ್ಥಿಕ್, ಬಾಬುಕವಿ ಅವರನ್ನು ಸನ್ಮಾನಿಸಲಾಯಿತು. ಎಲ್ಲಾ ಜೆಸಿಐ ಮಾಜಿ ಅಧ್ಯಕ್ಷರುಗಳನ್ನು ಅಭಿನಂದಿಸಲಾಯಿತು.



ಜೆಎಫ್ಎಂ ದಿನೇಶ್ ಶೆಟ್ಟಿ, ಜೆಎಫ್ಎಂ ಆರ್ಥಿಕ್ ಎಫ್ಎಂ, ಪರಮೇಶ್ವರ ಹೆಗ್ಡೆ, ಜೆಸಿಆರ್ಟಿ ಅಶ್ವಿನಿ ಡಿ.ಶೆಟ್ಟಿ, ಜೆಸಿಆರ್ಟಿ ಸಾರಿಕಾ ಚಂದ್ರಹಾಸ ಶೆಟ್ಟಿ, ಜೆಜೆಸಿ ಪ್ರಶಾಂತ್, ಜೆಜೆಸಿ ತಕ್ಷಿತ್ ಉಪಸ್ಥಿತರಿದ್ದರು.