Friday, October 27, 2023

ಮುಂಡೂರಿನಲ್ಲಿ ಜಲಜೀವನ್ ಮಿಷನ್ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ

Must read

ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರು ಗ್ರಾ.ಪಂಚಾಯತಿಯಲ್ಲಿ ಬುಧವಾರ ಜಲಜೀವನ್ ಮಿಷನ್ ಕಾರ್ಯಚಟುವಟಿಕೆಯಡಿ ಸಮುದಾಯ ಸಂಸ್ಥೆ ವತಿಯಿಂದ ಗ್ರಾಮೀಣ ಸಹಭಾಗಿತ್ವ, ವಿಶೇಷ ಗ್ರಾಮ ಸಭೆ ನಡೆಸಲಾಯಿತು ಐಇಸಿ ಮಹಾಂತೇಶ್ ಹಿರೇಮಠ್ ಮತ್ತು ದಯಾನಂದ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ಇಂಜಿನಿಯರ್ ಅಶ್ವಿನ್ ಕುಮಾರ್ ಅವರು ಮುಂಡಾಜೆ,ಸರ್ವೇ, ಕೆಮ್ಮಿಂಜೆ ಗ್ರಾಮದ ನಕ್ಷೆ ತಯಾರಿಸಿದರು. ಸಂಪೂರ್ಣ ಚಿತ್ರಣ ಬಿತ್ತರಿಸಲಾಯಿತು‌.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ, ಆಡಳಿತಾಧಿಕಾರಿ ಮೋನಪ್ಪ ಬಿ. ನೂತನ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿ.ಆರ್.ಎ ಸಂಯೋಜನೆಯ ಸಹಾಯಕ ಈಶ್ವರ್ ಅವರು ಸಹಕರಿಸಿದರು.

More articles

Latest article