ಬಂಟ್ವಾಳ: ಗ್ರಾಮ ಪಂಚಾಯತ್‌ಗೆ ನಡೆದ ಚುನಾವಣೆಯಲ್ಲಿ ಪಿಲಾತಬೆಟ್ಟು, ಇರ್ವತ್ತೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತರು ಉತ್ತಮ ಸಾಧನೆಗೈದಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು
ಜ.3 ರಂದು ರಾತ್ರಿ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಕಲಾಬಾಗಿಲುವಿನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಕಾಂಗ್ರೆಸ್ ಬೆಂಬಲಿತ ವಿಜೇತ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾ.ಪಂ. ಸದಸ್ಯರು ಕ್ರಿಯಾಶೀಲರಾಗಿದ್ದುಕೊಂಡು, ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಸೋತವರು ತಮ್ಮ ಸೋಲನ್ನು ಸವಾಲಾಗಿ ಸ್ವೀಕರಿಸಿ ಜನರ ಸಂಪರ್ಕದಲ್ಲಿದ್ದು ಕೆಲಸ ಮಾಡುವಂತೆ ಕಿವಿಮಾತು ಹೇಳಿದ ಅವರು ಮುಂಬರುವ ತಾ.ಪಂ., ಜಿ.ಪಂ.,ಚುನಾವಣೆ ಎದುರಿಸಲು ಕಾರ್ಯಕರ್ತರು ಈಗಿಂದಿಗಲೇ ಸಜ್ಜಾಗುವಂತೆ ಕರೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಿ ಗ್ರಾಮದ ಅಭಿವೃದ್ಧಿ ಜತೆ ಪಕ್ಷದ ಏಳಿಗೆಗೆ ಕೈಜೋಡಿಸಬೇಕು ಎಂದರು.
ಜಿಲ್ಲಾ ಕಂಬಳ ಸಮಿತಿ ಪ್ರ.ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು ಅವರು ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಸದಸ್ಯರಾಗಿ ಆಯ್ಕೆಯಾದ ಪ್ರಶಾಂತ್ ಜೈನ್, ಸುಽಂದ್ರ ಶೆಟ್ಟಿ, ಸುಚಿತ್ರಾ ಶೆಟ್ಟಿ, ವಿಜಯಾ ಶೆಟ್ಟಿ ಹಾಗೂ ಸ್ಪಽಸಿದ ಅಭ್ಯರ್ಥಿಗಳಾದ ಪ್ರಶಾಂತ್ ಕೋಟ್ಯಾನ್, ಸಿದ್ದಿಕ್, ಹೇಮಾವತಿ, ಚಂದ್ರಾವತಿ, ಜಯಶ್ರೀ, ಗುರು ಪ್ರಸಾದ್ ಶೆಟ್ಟಿ, ವಿಮಲಾ ಅವರನ್ನು ಅಭಿನಂದಿಸಲಾಯಿತು.
ತಾಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡದ ಅಧ್ಯಕ್ಷ ಗಂಗಯ್ಯ ಡಿ.ಎನ್.,ಪ್ರಮುಖರಾದ ಮೋಹನ್ ಹೆಗ್ಡೆ ಎನ್,ಅಬ್ದುಲ್ ನಜೀರ್ ಸಾಹೇಬ್, ಪದ್ಮನಾಭ ಶೆಟ್ಟಿ ಮಠ, ಮೋಹನ ಸಾಲ್ಯಾನ್, ಇದಿನಬ್ಬ ಕಲಾಬಾಗಿಲು, ಶೇಖ್ ರಹಮತ್ತುಲ್ಲಾ, ಮಂಜುನಾಥ ಪೂಜಾರಿ, ಶಂಕರ ಶೆಟ್ಟಿ ಬೆಟ್ಟುಮನೆ, ರವಿಚಂದ್ರ ಪಾಂಗಲ್ಪಾಡಿ, ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿ ತರಿದ್ದರು.
ಅಬೂಬಕ್ಕರ್ ಸಿದ್ದಿಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


