ಬಂಟ್ವಾಳ : ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮದಡಿ, ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಬಂಟ್ವಾಳ, ಹದಿಹರೆಯರ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಕಿಶೋರ ಕಿಶೋರಿಯರಿಗಾಗಿ ಅಂಗನವಾಡಿ ಕೇಂದ್ರ ಗೋಳಿನೆಲ ಇಲ್ಲಿ ನಡೆಯಿತು.
ಬಂಟ್ವಾಳ ಪ್ರಾಥಮಿಕ ನಗರ ಅರೋಗ್ಯ ಕೇಂದ್ರದ ವ್ಯೆದ್ಯಾದಿಕಾರಿ ಡಾ. ಅಶ್ವಿನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹದಿಹರೆಯದಲ್ಲಿ ದೈಹಿಕ ಮಾನಸಿಕ, ಸಾಮಾಜಿ ಬದಲಾವಣೆಗಳನ್ನು ಹತ್ತಿಕ್ಕಿ ವಿದ್ಯಾಭಾಸ್ಯದ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು.
ಹಿರಿಯ ಅರೋಗ್ಯ ಸಹಾಯಕಿ ಚಂದ್ರಪ್ರಭಾ, ಅಂಗನವಾಡಿ ಮೇಲ್ವಿಚಾರಕಿ ಲೀಲಾವತಿ ಅಂಗನವಾಡಿ, ಗೋಲಿನೆಲ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶುಭಶ್ರಿ, ಸಮತಿ ಗೋಲಿನೆಲ ಮುಖ್ಯ ಅತಿಥಿಗಳಾಗಿ ಭಾಗವಿಸಿದ್ದರು.
ಆರ್‌ಕೆಎಸ್‌ಕೆ ಕೌನ್ಸಿಲರ್ ಅಕ್ಷತಾ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಹದಿಹರೆಯದಲ್ಲಿ ಸಾಮನ್ಯವಾಗಿ ಕಂಡುಬರುವಂತಹ ಸಮಸ್ಯೆಗಳೆಂದರೆ ಪೌಷಿಕಾಂಶದ ಕೊರತೆ, ಮಾನಸಿಕ ಆರೋಗ್ಯದ ಸಮಸ್ಯೆ, ಲೈಂಗಿಕ ಮತ್ತು ಸಂತಾನೋತ್ಪಾತಿ ಸಮಸ್ಯೆಗಳು, ಲೈಂಗಿಕ ದೌರ್ಜನ್ಯಗಳು, ಸಾಂಕ್ರಾಮಿಕ ರೋಗಗಳ ಹಾಗೂ ದುಶ್ಚಟ ವ್ಯಸನಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾಯಕ್ರಮದಲ್ಲಿ ಕಿರಿಯ ಅರೋಗ್ಯ ಸಹಾಯಕಿಯರಾದ ಅಕ್ಷತಾ, ಸೌಮ್ಯ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಲಲಿತಾ ಸ್ವಾಗತಿಸಿದರು. ಸೌಮ್ಯ ವಂದಿಸಿದರು, ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.