ಬಂಟ್ವಾಳ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರ ಅನುರಾಧ ಅವರು ಕುಟುಂಬ ಸಹಿತ ಜ. 5ರಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿದರು.
ಈ ವೇಳೆ ಪತ್ರಕರ್ತರ ಜತೆ ಮಾತನಾಡಿದ ತಾರ ಅವರು, ಗುರುಗಳಾದ ಉಪದೇಶದ ಮೇರೆಗೆ ಪಣೋಲಿಬೈಲಿನ ತಾಯಿ ದರ್ಶನ ಪಡೆಯುವುದಕ್ಕೆ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಕ್ಷೇತ್ರಕ್ಕೆ ಭೇಟಿ ಭೇಟಿ ನೀಡಿ ಬಹಳ ಸಂತೋಷವಾಗಿದ್ದು, ಇಲ್ಲಿ ವಿಶೇಷ ಶಕ್ತಿ ಇರುವುದು ಭಕ್ತಾಧಿಗಳನ್ನು ಕಾಣುವಾಗಲೇ ತಿಳಿಯುತ್ತದೆ. ತಾಯಿಯನ್ನು ನಂಬಿ ಬರುತ್ತಿದ್ದು, ಆಕೆ ಕೈ ಬಿಡುವುದಿಲ್ಲ ಎಂಬ ನಂಬಿಕೆ ಅವರಲ್ಲಿದೆ ಎಂದರು.
ತಾರ ಅವರ ತಾಯಿ ಪುಷ್ಪಮ್ಮ,ಉದ್ಯಮಿ ವೆಂಕಟೇಶ್, ಶ್ರೀ ಆದಿಮಾಯೆ ಮಹಾಲಕ್ಮೀ ಮಂದಿರದ ಪಾತ್ರಿ ರಾಜೇಶ್, ಬೆಂಗಳೂರು ಉದ್ಯಮಿ ಗಣೇಶ್, ನಟ ಹರೀಶ್ ರಾಯ್, ಜೀವನ ರತನ್, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು, ದಯಾನಂದ ಪಣೋಲಿಬೈಲು, ಸಂತೋಷ್ ಪಣೋಲಿಬೈಲು, ಅರ್ಚಕರಾದ ವಾಸು ಮೂಲ್ಯ, ನಾರಾಯಣ ಮೂಲ್ಯ ಮತ್ತಿತರು ಹಾಜರಿದ್ದರು.