ಜಿಲ್ಲೆಯಲ್ಲಿ ಇಂದು ಮುಂಜಾನೇ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಿನಿ ಬಸ್ ಟಿಪ್ಪರ್ ನಡುವೆ ಡಿಕ್ಕಿಯಾಗಿ, 10 ಮಹಿಳೆರು ಹಾಗೂ ಓರ್ವ ಬಾಲಕ ಸೇರಿದಂತೆ 13 ಮಂದಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ.



ಧಾರವಾಡದ ಇಟ್ಟಿಗಟ್ಟಿ-ಯರಿಕೊಪ್ಪ ಮಧ್ಯದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಿಸುವ ಟಿಪ್ಪರ್ ಲಾರಿ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಟಿಟಿ ಚಾಲಕ ಸೇರಿದಂತೆ ಹನ್ನೊಂದು ಜನ ಮೃತಪಟ್ಟಿದ್ದಾರೆ. ನಾಲ್ವರು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ದಾವಣಗೆರೆಯ ವಿದ್ಯಾನಗರ ಮೂಲದವರಾಗಿದ್ದು, ಪೂರ್ಣಿಮಾ, ವೀಣಾ. ಆಶಾ ಜಗದೀಶ್ , ಪರಂಜ್ಯೋತಿ, ರಾಜೇಶ್, ಶಿವಕುಮಾರ್, ಉಷಾ, ವೇದಾ ನಿರ್ಮಾಲ, ಮಂಜುಳ, ನಿಲೇಶ್ . ರಜನಿ ಶ್ರೀನಿವಾಸ್ ಪ್ರೀತಿ ರವಿ ಕುಮಾರ್ ಎಂದು ಗುರುತಿಸಲಾಗಿದೆ.
ಇಂದು ನಸುಕಿನ ಜಾವ 3ಕ್ಕೆ ಟಿಟಿಯಲ್ಲಿ ದಾವಣಗೆರೆ ಬಿಟ್ಟಿದ್ದ ಇವರೆಲ್ಲ ಧಾರವಾಡ ನಗರಕ್ಕೆ ಆಗಮಿಸಿ ಉಪಹಾರ ಮುಗಿಸಿ ಪಣಜಿ ಪ್ರವಾಸ ಮುಂದುವರೆಸುವವರಿದ್ದರು. ಆದರೆ ಧಾರವಾಡ ನಗರ ಪ್ರವೇಶಿಸುವ ರಸ್ತೆ ಎರಡ್ಮೂರು ಕಿ.ಮಿ ಇರೋ ಮುಂಚೆಯೇ ಈ ಅಪಘಾತಕ್ಕೀಡಾಗಿದ್ದಾರೆ.
ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ: PM @narendramodi
— PMO India (@PMOIndia) January 15, 2021