Wednesday, October 18, 2023

ಅಕ್ರಮ ಕೆಂಪು ಕಲ್ಲು ಕೋರೆಗೆ ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತೃತ್ವದಲ್ಲಿ ದಾಳಿ

Must read

ಬಂಟ್ವಾಳ : ಅಕ್ರಮ ಕೆಂಪುಕಲ್ಲು ಗಣಿಗಾರಿಕೆಯ ಸ್ಥಳಕ್ಕೆ ಮಂಗಳವಾರ ಬಂಟ್ವಾಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿ 2 ಲಾರಿ ಹಾಗೂ 2 ಮೆಷಿನ್ ಗಳನ್ನು ವಶಪಡಿಸಿಕೊಂಡ ಘಟನೆ ಇರಾ ಗ್ರಾಮದಲ್ಲಿ ನಡೆದಿದೆ.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ಅವರ ನಿರ್ದೇಶನದಂತೆ ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಹಾಗೂ ಗ್ರಾಮಕರಣಿಕೆ ತನ್ವಿ ಅವರು ದಾಳಿ ನಡೆಸಿದ್ದಾರೆ. ಸೊತ್ತುಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ.

More articles

Latest article