ಬಂಟ್ವಾಳ : ಇರಾ 5ನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿನಂಧನಾ ಸಭೆ ನಡೆಯಿತು.



ಇರಾ ಗ್ರಾಮದ ಅಭಿವರ್ದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ ,ಅಭಿವರ್ದ್ಧಿ ಪರವಾದ ಕಾಂಗ್ರೆಸ್ ಆಡಳಿತವನ್ನು ನಿರಂತರವಾಗಿ ಬೆಂಬಲಿಸುತ್ತಿರುವ ಮತದಾರರಿಗೆ ಕ್ರತಜ್ಞತೆ ಸಲ್ಲಿಸುವುದು ನಮ್ಮ ಆದ್ಯತೆ ಮತದಾರರು ನೀಡಿದ ಅಭೂತಪೂರ್ವ ಸಹಕಾರಕ್ಕೆ ಪಕ್ಷವು ಆಭರಿಯಾಗಿ ಜನಪರ ಕಾರ್ಯಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸಲಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರರವರು ಇರಾ 5ನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡವರನ್ನು ಮೂಲೆ ಎಂಬಲ್ಲಿ ನಡೆದ ಅಭಿನಂಧನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ ಸಭೆಯನ್ನುದ್ದೇಶಿಸಿ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ಶಾಸಕರಾದ ಯು ಟಿ ಖಾದರ್ ನೇತೃತ್ವದಲ್ಲಿ ನಡೆಸಿದ ಹಲವಾರು ವಿಶೇಷ ಅನುದಾನಗಳ ಕಾಮಗಾರಿಯಿಂದಾಗಿ ಗ್ರಾಮದ ಚಿತ್ರಣವೇ ಬದಲಾಗಿದ್ದು ಮತದಾರರು ಕಾಂಗ್ರೆಸ್ ಪಕ್ಷದ ಬೆಂಬಲಿತರನ್ನು ಸೂಕ್ತವಾಗಿ ವಿರೋಧ ಪಕ್ಷದ ಅಪಪ್ರಚಾರವನ್ನು ಲೆಕ್ಕಿಸದೆ ಬೆಂಬಲಿಸಿದ್ದು ಗಮನಾರ್ಹ ಎಂದರು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್, ಗೌರವಾಧ್ಯಕ್ಷರಾದ ಉಸ್ಮಾನ್ ಕುರಿಯಾಡಿ, ಹಿರಿಯರಾದ ಇಬ್ರಾಹಿಂ ಮೂಲೆ, ಮಾರ್ಷಲ್ ಇರಾ, ನೂತನ ಸದಸ್ಯರಾಗಿ ಆಯ್ಕೆಗೊಂಡ ಮೊಯ್ದಿನ್ ಕುಂಜ್ಹಿ , ಅಬ್ದುಲ್ ಹಮೀದ್, ಎಂ ಬಿ ಉಮ್ಮರ್, ಯಾಕೂಬ್, ಪ್ರತಾಪ್ ಕರ್ಕೇರ, ಆಗ್ನೇಸ್ ಡಿ ಸೋಜಾ ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಮುಖಂಡ ಜಬ್ಬಾರ್ ಪರಪ್ಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಅಬೂಬಕ್ಕರ್ ಪರಪ್ಪು ಧನ್ಯವಾದ ಸಲ್ಲಿಸಿದರು.