ಬಂಟ್ವಾಳ : ಚಿಣ್ಣರಲೋಕದ ಸೇವಾ ಟ್ರಸ್ಟ್ ಇದರ ವತಿಯಿಂದ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಕಲೋತ್ಸವ ಕಾರ್ಯಕ್ರಮದಲ್ಲಿ ಚಿಣ್ಣರ ಲೋಕದ ಮೋಕೆದ ಕಲಾವಿದೆರ್ ಕಲಾ ತಂಡದಿಂದ ಫೆ. 22 ಮತ್ತು ಫೆ.25 ರಂದು ನಡೆಯಲಿರುವ ತೆಲಿಪುವುರಾ ಆತ ಬುಲಿಪುವರಾ ಮತ್ತು ಮೋಕೆಡ್ ಒಂತೆ ಜೋಕೆ ನಾಟಕಗಳಿಗೆ ಮುಹೂರ್ತ ಕಾರ್ಯಕ್ರಮ ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ರವಿವಾರ ಜರಗಿತು.



ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ, ಮುಹೂರ್ತ ನೆರವೇರಿಸಲಾಯಿತು. ಚಿಣ್ಣರ ಲೋಕದ ಸಂಚಾಲಕ, ನಾಟಕ ನಿರ್ದೇಶಕ ಮೋಹನಾದಾಸ್ ಕೊಟ್ಟಾರಿ, ಸಂಗೀತ ನಿರ್ದೇಶಕ ಶಿವಗಿರಿ ಕಲ್ಲಡ್ಕ, ಕಲಾವಿದರಾದ ಎಚ್ಕೇ ನಯನಾಡು, ರತ್ನದೇವ್ ಪುಂಜಾಲಕಟ್ಟೆ, ನಾರಾಯಣ ಸಿ.ಪೆರ್ನೆ, ರಾಜೇಶ್ ಆಚಾರ್ಯ, ಶ್ರೀಧರ್ ಫರಂಗಿಪೇಟೆ, ಹೊನ್ನಯ್ಯ ಅಮೀನ್ ರಾಯಿ, ಹರೀಶ್ ಆಲದಪದವು, ಸವ್ಯರಾಜ್ ಕಲ್ಲಡ್ಕ, ಪ್ರವೀಣ್ ಕೊಡಕ್ಕಲ್, ಪ್ರವೀಣ್ ಬಿ.ಸಿ. ರೋಡ್, ದೀಕ್ಷಿತ್ ಪೊಳಲಿ, ರಚನ್ ಆಲಾಡಿ ಮತ್ತಿತರರು ಉಪಸ್ಥಿತರಿದ್ದರು.