ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಹರಿದು ಬಂದ ಜನಸಾಗರ.
ಗ್ರಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ ಬೆಂಬಲಿತ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಮುಂಬರುವ ತಾ.ಪಂ.ಜಿ.ಪಂ.ಚುನಾವಣೆಗೆ ಪೂರ್ವತಯಾರಿಯ ಉದ್ದೇಶ ದಿಂದ ಆಯೋಜಿಸಲಾದ ಜನಸೇವಕ ಸಮಾವೇಶದಲ್ಲಿ ಕಾರ್ಯಕರ್ತರಿಂದ ಸಭಾಂಗಣ ತುಂಬಿ ತುಳುಕುತ್ತಿತ್ತು.
ಗಮನ ಸೆಳೆದ ಉಪಾಹಾರ
ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಎಲ್ಲರಿಗೂ ವಿಶೇಷ ವಾದ ಶುಚಿರುಚಿಯಾದ ತಿಂಡಿಗಳನ್ನು ತಯಾರಿಸಲಾಗಿತ್ತು.
ಎರಡು ಬಗೆಯ ದೋಸೆ ಹಾಗೂ ಉದ್ದಿನ ಅಂಬಡೆ, ಸಿಹಿತಿಂಡಿ, ಸೇವಿಗೆ ಹಾಲು ಚಾ ಕಾರ್ಯಕರ್ತರಿಗೆ ನವ ಉಲ್ಲಾಸ ನೀಡಿತ್ತು.
ರಾರಾಜಿಸಿದ ಕೇಸರಿ ಬಟ್ಟಿಂಗ್ಸ್
ಬಿಸಿರೋಡಿನಿಂದ ತಲಪಾಡಿ ಸಮಾವೇಶ ನಡೆಯುವ ಬಂಟರ ಭವನದ ವೆರಗೂ ಕೇಸರಿ ಬಂಟಿಗ್ಸ್ ಗಳು ರಾರಾಜಿಸುತ್ತಿದ್ದವು.
ಅದರೆ ಅಷ್ಟೇ ಶುಚಿತ್ವಕ್ಕೂ ಬೆಲೆ ನೀಡಿದ ಬಿಜೆಪಿ ಕಾರ್ಯಕರ್ತರು ಸಮಾವೇಶ ಮುಗಿದ ಕೆಲವೇ ಗಂಟೆಗಳಲ್ಲಿ ಎಲ್ಲಾ ಕೇಸರಿ ಬಂಟಿಗ್ಸ್ ಗಳ ತೆರವು ಕಾರ್ಯ ಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು.
ಬಂಟ್ವಾಳದಲ್ಲಿ ನಡೆದ ಸಮಾವೇಶ ಶುಚಿತ್ವದ ಜೊತೆಯಲ್ಲಿ ಅಚ್ಚುಕಟ್ಟಾಗಿ ನಡೆದುದು ಗಮನಸೆಳೆದಿದೆ.
ಆರಂಭದಲ್ಲಿ ಪುತ್ತೂರು ಜಗದೀಶ್ ಆಚಾರ್ಯ ಅವರ ಸಂಗೀತ ಕಾರ್ಯಕ್ರಮ, ಮಹಿಳಾ ಮೋರ್ಚಾದ ಸದಸ್ಯರಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಬಿಜೆಪಿ ಕೇಸರಿ ಸಾಲು ಹಾಗೂ ಹಣೆಗೆ ತಿಲಕ ಇಟ್ಟು ಸ್ವಾಗತಿಸಿದರು.
ಪೂರ್ಣ ಕುಂಭ ಸ್ವಾಗತ ದ ಮೂಲಕ ಈಶ್ವರಪ್ಪ ಅವರನ್ನು ಸ್ವಾಗತಿಸಿದ ಬಳಿಕ ಸಮಾವೇಶಕ್ಕೆ ಪ್ರವೇಶ ಮಾಡುವ ಮೊದಲು ಪ್ರವೇಶ ದ್ವಾರ ದ ಎದುರು ಗೋಮಾತೆಗೆ ಗೋಪೂಜೆ ನಡೆಸಿದರು.