ಬಂಟ್ವಾಳ: ಬರಿಮಾರು ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ, ಬರಿಮಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ 06 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗಾಗಿ ಜ 24 ರಂದು ನಡೆದ ಕ್ರೀಡಾ,ಸಾಂಸ್ಕೃತಿಕ, ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಬರಿಮಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಕಲ್ಯಾಣಿ, ಗ್ರಾಮ ಪಂಚಾಯತ್ನ ನೂತನ ಮಹಿಳಾ ಸದಸ್ಯರಾದ ಶಶಿಕಲಾ, ಪುಷ್ಪಲತಾ, ಶೃತಿ, ವನಿತಾ ಅವರು ಜೊತೆಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಳಿಸಿದರು.
ಕಾರ್ಯಕ್ರಮ ವನ್ನು ಉದ್ಘಾಟಿಸಿದ ಮುಖ್ಶೋಪಾಧ್ಯಾಯರಾದ ಕಲ್ಯಾಣಿಯವರು ,ಮಾತನಾಡಿ ಹಿಂದಿನಿಂದಲು ಹೆಣ್ಣು ಮಕ್ಕಳ ಬಗ್ಗೆಗಿನ ತಾರತಮ್ಯ, ಲಿಂಗ ಅಸಮಾನತೆ, ಹೆಣ್ಣು ಮಕ್ಕಳ ಶೋಷಣೆ ನಿರಂತರವಾಗಿತ್ತು.
ಇವೆಲ್ಲವನ್ನು ಮೆಟ್ಟಿ ನಿಂತು ಹೆಣ್ಣು ಯಾವ ರೀತಿ ಸಬಲವಾಗಬೇಕು , ಹೆಣ್ಣು ಮಾತೆಯಾಗಿ, ಪತ್ನಿಯಾಗಿ,ಮಗಳಾಗಿ ಯಾವ ರೀತಿ ತನ್ನ ಕರ್ತವ್ಯ ನಿರ್ವಹಿಸಬೇಕು ಎಂಬ ಬಗ್ಗೆ ಅವರು ತಿಳಿಸಿದರು.
06 ರಿಂದ 10 ವರ್ಷದ ಹಾಗೂ 11 ರಿಂದ 18 ವರ್ಷ ದೊಳಗಿನ ಎರಡು ವಿಭಾಗಗಳಲ್ಲಿ ಕ್ರೀಡೆ, ಸಾಂಸ್ಕೃತಿಕ, ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪುಟ್ಟ ಮಕ್ಕಳಿಗೆ ಕಪ್ಪೆ ಜಿಗಿತ, ಲಗೋರಿ, ಸಂಗೀತ, ಚಿತ್ರಕಲೆ ಹಾಗೂ ಇತರರಿಗೆ ಥ್ರೋಬಾಲ್ , ಸಂಗೀತ, ಲಗೋರಿ, ಚಿತ್ರ ಕಲೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮದ ಮಕ್ಕಳು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು. ವಿಜೇತರಾದ ಮಕ್ಕಳಿಗೆ ಪದಕಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಹೆಚ್.ಕೆ ರವರು ಸ್ವಾಗತಿಸಿ ರಾಷ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.