ಮಂಗಳೂರು: ದ. ಕ. ಜಿಲ್ಲೆಯ ಮಂಗಳೂರು ತಾಲೂಕಿನ ಮಲವೂರು ಗ್ರಾ. ಪಂ.ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಂಜೀವನ್ ಪುಡ್ಸ್ ಎಂಬ ಬೇಕರಿ ಘಟಕ ವನ್ನು ಸ್ಥಳೀಯ ಸಾರ್ವಜನಿಕ ರ ದೂರಿನ ಮೇರೆಗೆ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಮಂಗಳೂರು ಇವರು ಸ್ಥಗಿತ ಗೊಳಿಸುವಂತೆ ಸೂಚಿಸಿರುವ ಕಾರಣ ಮಲವೂರು ಗ್ರಾ. ಪಂ. ಯ ಸದರಿ ಘಟಕದ 2020-21 ನೇ ಸಾಲಿನ ಉದ್ದಿಮೆ ಪರವಾನಿಗೆ ಯು ನವಿಕರಿಸದೇ ವಿಲೇ ಇಟ್ಟಿರುತ್ತದೆ.ಆದರೆ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಳ್ಳುತ್ತಿರುವ ಪ್ರಸನ್ನ ರವಿ ಮತ್ತು ಸದರಿ ಬೇಕರಿ ಘಟಕದ ಮಾಲೀಕರದ ವಾಣಿ ಎಂಬವರು ಕೆಲವು ಜನರನ್ನು ಸೇರಿಸಿ ಕೊಂಡು ಜ ಮತ್ತೆ,22ರಂದು ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಮಾಣಿಕ ಅಧಿಕಾರಿ ವೆಂಕಟರಮಣ ಪ್ರಕಾಶ್ ರವರ ವಿರುದ್ಧ ಸತ್ಯ ವಿಷಯ ವನ್ನು ಮರೆಮಾಚಿ ಸುಳ್ಳು ಆರೋಪ ಗಳನ್ನು ಹೊರಿಸಿ ವ್ಯಕ್ತಿ ಗತವಾಗಿ ನಿಂದಿಸಿ ತೇಜೋವಧೆ ಗೊಳಿಸಿದ್ದಲ್ಲದೆ ಈ ಘಟನೆ ಯನ್ನು ಸಂಪೂರ್ಣ ವಾಗಿ ವಿಡಿಯೋ ಚಿತ್ರೀಕರಿಸಿ ಸ್ಥಳೀಯ ಟಿವಿ ಚಾನೆಲ್ ಮತ್ತು ಫೇಸಬುಕ್ ಮುಂತಾದ ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿಯಬಿಟ್ಟು ನಿಷ್ಠಾವಂತ ಅಧಿಕಾರಿ ಯ ನೈತಿಕ ಸ್ಟೈರ್ಯವನ್ನು ಕುಗ್ಗಿಸಲು ಪ್ರಯತ್ನಿಸಲಾಗಿದೆ.
ಈ ಘಟನೆಯು ಸಾರ್ವಜನಿಕರಿಗೆ ಸರಕಾರಿ ವ್ಯವಸ್ಥೆಯಲ್ಲಿ ಅಪನಂಬಿಕೆ ಹುಟ್ಟುವಂತೆ ಮಾಡಿರುವ ಪ್ರಚೋದನೆ ಆಗಿರುತ್ತದೆ.
ಒಬ್ಬ ಅಧಿಕಾರಿ ತಪ್ಪು ಮಾಡಿದರೆ ಅವನ ವಿರುದ್ಧ ಮೆಲ್ಮನವಿ ಸಲ್ಲಿಸಿ ನ್ಯಾಯ ಪಡೆಯಲು ಸಂವಿಧಾನಿಕವಾಗಿ ಮಾರ್ಗವಿದ್ದರೂ ಈ ರೀತಿಯಾಗಿ ಅವಹೇಳನ ದ ಮೂಲಕ ಪರವಾನಿಗೆ ನವೀಕರಿಸಲು ಅನ್ಯ ಮಾರ್ಗ ಬಳಸಿರುವುದು ಕಾನೂನಿಗೆ ವಿರುದ್ಧ ವಾಗಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಷಯ ದ ಸತ್ಯಾಸತ್ಯತೆ ಯನ್ನು ತಿಳಿದುಕೊಳ್ಳದೆ ಒಬ್ಬ ನಿಷ್ಠಾವಂತ ಅಧಿಕಾರಿಯ ಮೇಲೆ ಸಂಶಯ ಗೊಳ್ಳುವಂತೆ ಟಿವಿ ಚಾನೆಲ್ ನಲ್ಲಿ ಸುದ್ದಿ ಪ್ರಸಾರ ಮತ್ತು ಸಾಮಾಜಿಕ ಜಾಲತಾಣ ದಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವುದು ನ್ಯಾಯ ಸಮ್ಮತ ವಲ್ಲ ಈ ಘಟನೆಯನ್ನು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೆಮಾಭಿವೃದ್ಧಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರ ವಾಗಿ ಖಂಡಿಸುತ್ತದೆ.