ಬಂಟ್ವಾಳ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸುರಕ್ಷತಾ ಮಾಸಿಕ ಕಾರ್ಯಕ್ರಮದ ಅಂಗವಾಗಿ ಎಸ್.ಪಿ.ಲಕ್ಮೀಪ್ರಸಾದ್ ಅವರ ನಿರ್ದೇಶನದಂತೆ, ದ.ಕ.ಜಿಲ್ಲಾ ಪೋಲೀಸ್ , ಬಂಟ್ವಾಳ ಉಪವಿಭಾಗ , ಬಂಟ್ವಾಳ ಸಂಚಾರಿ ಠಾಣೆ ಹಾಗೂ ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಚಾರ ಸುರಕ್ಷತೆಯ ವಿಚಾರ ಗಳನ್ನೊಳಗೊಂಡ ಬೀದಿ ನಾಟಕ ಪ್ರದರ್ಶನವನ್ನು ಮೆಲ್ಕಾರ್ ಜಂಕ್ಷನ್ ನಲ್ಲಿ ನಡೆಯಿತು.



ಆ ಬಳಿಕ ಬಿಸಿರೋಡಿನಲ್ಲಿ ರಸ್ತೆ ಸುರಕ್ಷತಾ ಬೀದಿ ನಾಟಕ ಪ್ರದರ್ಶನ ನಡೆಯಿತು.
ಮುಖ್ಯ ಅತಿಥಿಯಾಗಿ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ , ಪಿ.ಎಸ್.ಐ ರಾಜೇಶ್ ಹಾಗೂ ಕೊರಗಪ್ಪ ನಾಯ್ಕ್ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.