Sunday, October 22, 2023

ಫರ್ಲ ಚರ್ಚಿಗೆ ಕಳ್ಳರ ಲಗ್ಗೆ

Must read

ಬಂಟ್ವಾಳ: ನಾವೂರು ಗ್ರಾಮದ ಫರ್ಲ ಚರ್ಚಿಗೆ ಕಳ್ಳರು ನುಗ್ಗಿ ಹಣಕ್ಕೆ ತಡಕಾಡಿ ಸೊತ್ತುಗಳಿಗೆ ಹಾನಿ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಕಳ್ಳರು ಚರ್ಚಿನೊಳಗೆ ಬರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಆದರೆ ಗುರುತು‌ ಪತ್ತೆಯಾಗಿಲ್ಲ. ಚರ್ಚಿನ ಬಾಗಿಲು ಮುರಿದು ಒಳ್ಳ ನುಗ್ಗಿರುವ ಕಳ್ಳರು ಹಣಕ್ಕೆ ಹುಡುಕಾಟ ನಡೆದಿದ್ದು, ಆದರೆ ಚರ್ಚಿನಲ್ಲಿ ಹಣದೇ ಇಡದೇ ಇರುವುದರಿಂದ ಅವರು ಬರಿಗೈಯಲ್ಲಿ ವಾಪಾಸಾಗಿರುವ ಸಾಧ್ಯತೆ ಇದೆ.

ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಚರ್ಚಿನ ಪವಿತ್ರ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಗಮಿಸಿದ್ದಾರೆ.

More articles

Latest article