ಬಂಟ್ವಾಳ: ಬಂಟ್ವಾಳದ ಶೃಂಗಾರ್ ಜ್ಯುವೆಲ್ಲರ್ಸ್ ಚಿನ್ನದ ಕೆಲಸ ಮಾಡುತ್ತಿರುವ ಕಕ್ಯಪದವು ನಿವಾಸಿ ನವೀನ್ ಆಚಾರ್ಯ ಅವರಿಗೆ ಜ. 15ರಂದು ಬಂಟ್ವಾಳ ಪೇಟೆಯಲ್ಲಿ ಸಿಕ್ಕಿದ ಸರವನ್ನು ವಾರಿಸುದಾರರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ನವೀನ್ ಆಚಾರ್ಯ ಅವರು ಸರ ಸಿಕ್ಕಿದ ಬಳಿಕ ವಾಟ್ಸಾಪ್ ಮೂಲಕ ಸರ ಸಿಕ್ಕಿರುವ ವಿಚಾರವನ್ನು ತಿಳಿಸಿದ್ದರು. ಬಳಿಕ ಅದನ್ನು ಶೃಂಗಾರ್ ಜ್ಯುವೆಲ್ಲರ್ಸ್ ನಲ್ಲಿ ಇಟ್ಟಿದ್ದರು. ಹೀಗಾಗಿ ಜ. ೧೬ರಂದು ವಾರಿಸುದಾರ ರಾಜೇಶ್ ಆಚಾರ್ಯ ಅವರು ಜ್ಯುವೆಲ್ಲರ್ಸ್ ಗೆ ಆಗಮಿಸಿ ಸರವನ್ನು ಪಡೆದು ನವೀನ್ ಆಚಾರ್ಯ ಹಾಗೂ ಜ್ಯುವೆಲ್ಲರ್ಸ್ ನ ಸತೀಶ್ ಭಂಡಾರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.