Wednesday, April 10, 2024

ಯುವಜನ ಸಬಲೀಕರಣ ನಿಗಮ ಸ್ಥಾಪನೆಗೆ ಹಕ್ಕೊತ್ತಾಯ : ಕೆ.ಟಿ.ತಿಪ್ಪೇಸ್ವಾಮಿ

ಬಂಟ್ವಾಳ : ಕರ್ನಾಟಕದಲ್ಲಿ ಯವಜನ ಸಬಲೀಕರಣ ನಿಗಮದ ಸ್ಥಾಪನೆ ನಮ್ಮ ಹಕ್ಕೊತ್ತಾಯವಾಗಿದ್ದು, ಇದು ಯುವಜನ ಸಬಲೀಕರಣದ ಕಾರ್ಯಕ್ಕೆ ಶಕ್ತಿ ತುಂಬಲಿದೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಯುವಜನ ಅಭಿವೃದ್ದಿ ನಿಧಿಯ ಪರಿಷತ್ ಮತ್ತು ಕಾರ್ಯಕಾರಿಣಿ ಸದಸ್ಯ‌ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ಸಂವಾದ – ಯುವ ಸಂಪನ್ಮೂಲ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಜ.17 ಭಾನುವಾರ ಕುದ್ರೋಳಿಯಲ್ಲಿ ನಡೆಯಲಿರುವ ಯುವಜನ ಹಕ್ಕಿನ ಮೇಳ ದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಯುವಜನ ಸಬಲೀಕರಣ ನಿಗಮ ಸ್ಥಾಪನೆಯ ಹಕ್ಕೊತ್ತಾಯ ಅಭಿಯಾನದ ವಿವರ ನೀಡಿದರು.

ಕರ್ನಾಟಕ ರಾಜ್ಯ ಯುವ ನೀತಿ ೨೦೧೨ ರ ಶಿಫಾರಸಿನಂತೆ ರಾಜ್ಯದಲ್ಲಿ ಯುವಜನ ಸಬಲೀಕರಣ ನಿಗಮ ಮಾಡುವುದಾಗಿ ೨೦೧೩ ರಲ್ಲಿ ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನವಾಗಿತ್ತು. ಆದರೆ ಆ ಸಮಯದಲ್ಲಿ ಸರಕಾರದ ಅವಧಿ ಮುಗಿದಿದ್ದರಿಂದ ಈ ತೀರ್ಮಾನವು ಕಾರ್ಯಗತ ಆಗಲಿಲ್ಲ. ಆಗ ಅಧಿಕಾರದಲ್ಲಿ ಇದ್ದ ಪಕ್ಷವೇ ಈಗ ಮತ್ತೆ ಅಧಿಕಾರದಲ್ಲಿ ಇದ್ದು, ಯುವಜನರ ಸಬಲೀಕರಣ ನಿಗಮವು ಎಲ್ಲಾ ನಿಟ್ಟಿನಲ್ಲೂ ಆವಶ್ಯಕವಾಗಿರುವುದರಿಂದ “ ಕರ್ನಾಟಕ ಯವಜನ ಸಬಲೀಕರಣ ನಿಗಮವನ್ನು ಸ್ಥಾಪನೆ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದರು.

ಸಂವಾದ ಸಂಘಟನೆಯ ರಾಜ್ಯ ಸಂಚಾಲಕ ಜನಾರ್ಧನ ಕೆಸರುಗದ್ದೆ ಮಾತನಾಡಿ,

ಕರ್ನಾಟಕದ ಹಲವು ಕಡೆ, ಹಲವು ಸಂಘಟನೆಗಳಿಂದ ಕರ್ನಾಟಕ ಸರಕಾರವು ಯುವಜನ ಸಬಲೀಕರಣ ನಿಗಮ ಸ್ಥಾಪನೆ ಮಾಡಬೇಕು ಎಂಬ ಅಭಿಯಾನ ನಡೆಯುತ್ತಿದೆ. ಇದರ ಭಾಗವಾಗಿ ನಡೆಯಲಿರುವ ಯುವಜನ ಹಕ್ಕಿನ ಮೇಳ ದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಯುವಜನ ಕಾರ್ಯಕರ್ತರು, ಮುಂದಾಳುಗಳು ಭಾಗವಹಿಸುತ್ತಿದ್ದಾರೆ, ತುಮಕೂರು ಜಿಲ್ಲೆಯ ಯುವಜನ ತಂಡವೊಂದು ಬೈಕ್ ನಲ್ಲಿ ಅಭಿಯಾನ ನಡೆಸುತ್ತಾ ಜಿಲ್ಲೆಗೆ ಆಗಮಿಸಿದೆ ಎಂದವರು ಹೇಳಿದರು. ಯುವಜನ, ಹೆತ್ತವರು, ವಿದ್ಯಾ ಸಂಸ್ಥೆಗಳು, ಮತ್ತು ಸರಕಾರ ಯುವಜನರ ಹಕ್ಕುಗಳನ್ನು ಗಮನಿಸಲಿ, ಘೋಷಿಸಲಿ. ಯುವಜನರು ತಮ್ಮ ಮತ್ತು ತಮ್ಮ ಸಮಾಜದ ಹಿತಕ್ಕಾಗಿ ಸಂವಿಧಾನದತ್ತ ಕರ್ತವ್ಯಗಳನ್ನು ನಿಭಾಯಿಸಬೇಕು ಹಾಗೂ ಯುವಜನರ ಸಬಲೀಕರಣಕ್ಕೆ ಬೇಕಾದ ಸಾಂಸ್ಥಿಕ ವ್ಯವಸ್ಥೆಗಳು ರಚನೆಗೊಳ್ಳಬೇಕು ಎಂದವರು ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ಯುವಜನ ಹಕ್ಕುಗಳ ಆಂದೋಲನದ ಸಂಚಾಲಕ ದೇವರಾಜ್ ಪಾಟೀಲ್, ಕರ್ನಾಟಕ ಯುವ ಸಮನ್ವಯದ ಜನಾರ್ಧನ ಜೆ.ಎಸ್ ಉಪಸ್ಥಿತರಿದ್ದರು.

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...