Monday, October 23, 2023

ರಾಬರಿ ಎಂದು ನಂಬಿಸಲು ಹೋಗಿ ಸಿಕ್ಕಿಬಿದ್ದ ಅಜ್ಜಿ!

Must read

ಬಂಟ್ವಾಳ: ರಾಬರಿ ಎಂದು ನಂಬಿಸಲು ಹೋಗಿ ಸಿಕ್ಕಿಬಿದ್ದ ಅಜ್ಜಿ!

ಪೋಲೀಸರ ತನಿಖೆಯ ವೇಳೆ ಬಯಲಾಯಿತು ಪಿನ್ ಟು ಪಿನ್ ಮಾಹಿತಿ, ಅಜ್ಜಿಯೊಬ್ಬರ ನಾಟಕೀಯ ಪ್ರಸಂಗ! ಪೋಲೀಸರನ್ನು ತಲೆಕೆಡುವಂತೆ ಮಾಡಿತ್ತು, ಕೊನೆಗೂ ಬಯಲಾಯಿತು ಸತ್ಯ!

 

*ನಡೆದದ್ದು ಇಷ್ಟೇ*

ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ನಿವಾಸಿ

ಶಾಂತ ನಾಯಕ್ ಎಂಬವರು ಪೇಟಗೆ ಬಂದು ವಾಪಸು ಮನೆಗೆ ತೆರಳುವ ವೇಳೆ ಮನೆಯ ಪಕ್ಕದಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕುತ್ತಿಗೆಯಲ್ಲಿದ್ದ ಮೂರು ಪವನ್ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದರು.

ಜ.8 ರಂದು ಘಟನೆ ನಡೆದಿತ್ತು. ಚಿನ್ನದ ಸರ ಕಳೆದುಕೊಂಡ ಅಜ್ಜಿ ನೇರವಾಗಿ ಮನೆಗೆ ಹೋಗಿದ್ದರು.

ಚೈನ್ ಸ್ನಾಚಿಂಗ್ ಮಾಡುವ ವೇಳೆ ಅಜ್ಜಿಯ ಬೆನ್ನಿಗೆ ಗಾಯವಾಗಿತ್ತು.

ಘಟನೆ ನಡೆದು ಬಳಿಕ ಸಂಜೆ ವೇಳೆ ಮಗಳು ಮಂಗಳೂರಿನಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ವಿಚಾರ ತಿಳಿಸಿದ್ದಾರೆ.

ಮಗಳು ನೇರವಾಗಿ ಅಜ್ಜಿಯನ್ನು ಬಂಟ್ವಾಳ ನಗರ ಪೋಲೀಸ್ ಠಾಣೆ ಗೆ ಕರೆದುಕೊಂಡು ಬಂದು ಘಟನೆಯ ಬಗ್ಗೆ ವಿವರಿಸಿ ಪ್ರಕರಣ ದಾಖಲು ಮಾಡುತ್ತಾರೆ.

ಆದರೆ ಈ ಘಟನೆ ಗಂಭೀರ ಪ್ರಕರಣವೆಂದು ಪರಿಗಣಿಸಿದ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ.ನಾಗರಾಜ್ ಅವರು ನಗರ ಠಾಣಾ ಎಸ್.ಐ.ಅವಿನಾಶ್ ಹಾಗೂ ಅಪರಾಧ ವಿಭಾಗದ ಎಸ್.ಐ ಕಲೈಮಾರ್ ನೇತ್ರತ್ವದಲ್ಲಿ ತಂಡ ರಚನೆ ಮಾಡಿ ಅವರು ತಕ್ಷಣವೇ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಲು ಶುರು ಮಾಡುತ್ತಾರೆ.

ಸಿ.ಸಿ.ಕ್ಯಾಮರಾ ಪೂಟೇಜ್ ಗಳ ಪರಿಶೀಲನೆ ನಡೆಸುತ್ತಾರೆ.

ಆದರೆ ಅ ದಿನ ದೂರು ನೀಡಿದ ಅಜ್ಜಿಯ ಮನೆಯ ರಸ್ತೆಯಲ್ಲಿ ಅಂತಹ ಯಾವುದೇ ಘಟನೆ ನಡೆದ ಬಗ್ಗೆ ಸುಳಿವು ಪೋಲೀಸ್ ತಂಡಕ್ಕೆ ಸಿಗದ ಹಿನ್ನೆಲೆಯಲ್ಲಿ ಅಜ್ಜಿಯ ವಿಚಾರಣೆಗೆ ಮುಂದಾಗುತ್ತಾರೆ.

ಆದರೆ ಅಜ್ಜಿ ಕೊನೆಗೆ ತಪ್ಪು ಒಪ್ಪಿಕೊಂಡು ನಡೆದ ಸತ್ಯ ವಿಚಾರವನ್ನು ಬಾಯಿಬಿಡುತ್ತಾರೆ.

ಅಜ್ಜಿಯ ಕುತ್ತಿಗೆಯಲ್ಲಿ ನ ಚಿನ್ನದ ಚೈನ್ ಒಂದನ್ನು ಯಾವುದೋ ಉದ್ದೇಶದಿಂದ ಸಂಬಂಧಿಕರಿಗೆ ನೀಡಿದ್ದರು. ಬಳಿಕ ಮಗಳು ಬೈಯುತ್ತಾಳೆ ಎಂಬ ಕಾರಣಕ್ಕಾಗಿ ಬೆನ್ನಿಗೆ ಪರಚಿದ ರೀತಿಯಲ್ಲಿ ಗಾಯ ಮಾಡಿಕೊಂಡು ರಾಬರಿ ಮಾಡಿದ್ದಾರೆ ಎಂಬ ನಾಟಕ ಮಾಡಿದ್ದರು.

ಸಾಕಷ್ಟು ತಲೆನೋವು ಉಂಟುಮಾಡಿದ್ದ ಪ್ರಕರಣವನ್ನು ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದ ಎಸ್.ಐ.ಅವಿನಾಶ್ ಹಾಗೂ ಕಲೈಮಾರ್ ಅವರ ತಂಡ ಚಾಕಚಕ್ಯತೆಯಿಂದ ಇತ್ಯರ್ಥ ಮಾಡಿದ ಬಳಿಕ ಅಜ್ಜಿಯ ಮೇಲೆ ಪ್ರಕರಣ ದಾಖಲಿಸಲು ನ್ಯಾಯಲಯಕ್ಕೆ ಪತ್ರ ಸಲ್ಲಿಸಿದ್ದಾರೆ.

More articles

Latest article