Thursday, October 26, 2023

ಪ್ರಧಾನ ಮಂತ್ರಿ ಆಶಯ ಈಡೇರಿಸಲು ಪ್ರಮಾಣಿಕ ಪ್ರಯತ್ನ

Must read

ಬಂಟ್ವಾಳ : ಪ್ರಧಾನ ಮಂತ್ರಿ ಆಶಯದಂತೆ 2023 ಕ್ಕೆ ಸೂರು ಇಲ್ಲದ ಯಾರು ಇರಬಾರದು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ 10 ಲಕ್ಷ ಮನೆ ನಿರ್ಮಾಣ ಮಾಡಲು ಉದ್ದೇಶ ಹೊಂದಿದ್ದೇವೆ ಎಂದು ಸಚಿವ ಸೋಮಣ್ಣ ಹೇಳಿದರು .

ಅವರು ನರಿಕೊಂಬು ವೀರಭದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಈ ವಿವಾರ ತಿಳಿಸಿದರು.

10 ಲಕ್ಷ ಮನೆ ನಿರ್ಮಾಣದ ಕಾರ್ಯದ ಜೊತೆ ಪ್ರತಿ ಹಂತದ ಪರಿಶೀಲನೆ ನಡೆಸಲಾಗುವುದು ಮತ್ತು ಅರ್ಹರಿಗೆ ಸಿಗುವ ರೀತಿಯಲ್ಲಿ ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

ವಸತಿ ಸೌಕರ್ಯ ಒದಗಿಸುವ ಯೋಜನೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

3560 ಎಕರೆ ಯಲ್ಲಿ ಎಲ್ಲಾ ಬಡವರಿಗೂ ಸೈಟು ಕೊಡಲು ಸರಕಾರ ಜಾಗ ಖರೀದಿ ಮಾಡಿದೆ. 224. ಕ್ಷೇತ್ರದಲ್ಲಿ ಯೂ ಈ ಉದ್ದೇಶ ಹೊಂದಿದ್ದು 800 ಸಾವಿರ ಕೋಟಿ ರೂ ಅವಶ್ಯಕತೆ ಇದ್ದು ಅದನ್ನು ಮುಂದಿನ ಬಜೆಟ್ ನಲ್ಲಿ ಸೇರಿಸಲಾಗುವುದು ಎಂದು ಅವರು ತಿಳಿಸಿದರು.

ಮನೆ ನಿರ್ಮಾಣದ ಕಾರ್ಯ ವಿವಿಧ ಹಂತದಲ್ಲಿದ್ದು ಮುಂದಿನ ಜೂನ್ ವೇಳೆಗೆ 97 ಸಾವಿರ ಸೈಟ್ ಗಳನ್ನು ನೀಡಲು ಯೋಜನೆ ತಯಾರು ಮಾಡಲಾಗಿದೆ.

ಐತಿಹಾಸಿಕ ರೀತಿಯಲ್ಲಿ ತೀರ್ಮಾನ ಒಂದನ್ನು ಕೈಕೊಂಡಿದ್ದು ರಾಜ್ಯದ 2400 ಕೊಳಚೆ ಪ್ರದೇಶಗಳಲ್ಲಿ 8500 ಎಕರೆ ಕ್ಕೂ ಮೇಲ್ಪಟ್ಟು ಜಾಗದಲ್ಲಿ ಘೋಷಿತ ಸ್ಲಮ್ ಗಳಿದ್ದು ಈವರೆಗೆ ಅವರನ್ನು ಓಟ್ ಬ್ಯಾಂಕ್ ಆಗಿ ಉಪಯೋಗಮಾಡುತ್ತಿದ್ದೇವು ,ಮುಂದಿನ ದಿನಗಳಲ್ಲಿ ಅ ಓಟ್ ಬ್ಯಾಂಕ್ ನ್ನು ಶಾಶ್ವತವಾಗಿ ಯೋಜನೆ ಮಾಡುವ ಉದ್ದೇಶದಿಂದ ಅವರಿಗೆ ಪ್ರಾಪರ್ಟಿ ರೈಟ್ಸ್ ನೀಡುವ ಯೋಚನೆ ವಸತಿ ಇಲಾಖೆ ಮೂಲಕ ತೀರ್ಮಾನ ಮಾಡಿದ್ದೇವೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕ್ರಿಯಾಶೀಲತೆ ಹಾಗೂ ಬಡವರ ಬಗೆಗಿನ ಕಾಳಜಿಯ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾ.ಪಂ.ಗೂ 50 ರಂತೆ ಮನೆ ನೀಡುವ ಭರವಸೆ ನೀಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಬೇಟಿಗೆ ಸಚಿವ ಸೋಮಣ್ಣ ಅವರು ಮುಂದಾಗಿದ್ದರು ಆದರೆ ಪೂಜಾರಿ ಅವರು ಬಂಟ್ವಾಳದ ಮನೆಯಲ್ಲಿರದ ಕಾರಣ ಬೇಟಿ ಕಾರ್ಯ ಕೊನೆ ಗಳಿಗೆಯಲ್ಲಿ ರದ್ದಾಯಿತು.

ಪೂಜಾರಿ ಅವರ ಜೊತೆಗಿನ ಹಳೆಯ ಒಡನಾಟ ವನ್ನು ನೆನಪು ಮಾಡಿದ ಅವರು ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರು ನನಗೆ 40 ವರ್ಷಗಳಿಂದ ಗುರುಗಳು ಎಂಬ ಶಬ್ದವನ್ನು ಉಲ್ಲೇಖ ಮಾಡಿದರು.

More articles

Latest article